Posts Slider

Karnataka Voice

Latest Kannada News

ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರಗೆ ಬೆಂಬಲದ ಮಹಾಪೂರ: ಸಿಪಿಎಂ, ಸಿಪಿಐಎಂ ಮತ್ತೂ….

1 min read
Spread the love

ಕೊರೋನಾ ಸಂದರ್ಭದಲ್ಲಿ ಬಹುತೇಕ ಪದವೀಧರರು ನೌಕರಿ ಕಳೆದುಕೊಂಡಿದ್ದು ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚಾಗಿದೆ. ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ನೇಮಕಾತಿ ಮೂಲಕ ಪರಿಸ್ಥಿತಿಯನ್ನು ಸರಿದೂಗಿಸಬೇಕಿದೆ. ತಾವು ಆಯ್ಕೆಯಾದರೆ ಪದವೀಧರರ ನೇಮಕಾತಿ ಬಗ್ಗೆಯೇ ಹೆಚ್ಚಿನ ಒತ್ತು ನೀಡುತ್ತೇನೆ.

-ಬಸವರಾಜ ಗುರಿಕಾರ, ಪಕ್ಷೇತರ ಅಭ್ಯರ್ಥಿ

ಹುಬ್ಬಳ್ಳಿ: ನೌಕರರ, ಶಿಕ್ಷಕರ ಅಭುದ್ಯಯಕ್ಕಾಗಿ ಸಂಘಟನೆ ರಚಿಸಿಕೊಂಡು ಈ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸಿದ ಅನುಭವ ತಮಗಿದೆ. ಇದೇ ಮಾದರಿಯಲ್ಲಿ ಪದವೀಧರರ ಸಮಸ್ಯೆಗಳಿಗೂ ದ್ವನಿಯಾಗುತ್ತೇನೆಂದು ಪಶ್ಚಿಮ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ ನೀಡಿದರು.

ಕ್ಷೇತ್ರದ ವಿವಿಧೆಡೆ ಪ್ರಚಾರದಲ್ಲಿ ತೊಡಗಿರುವ ಬಸವರಾಜ ಗುರಿಕಾರರಿಗೆ  ಭೇಟಿಯಾದ ಪದವೀಧರರು ತಮ್ಮ ಸಮಸ್ಯೆಗಳ ಪಟ್ಟಿ ನೀಡಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಿಕ್ಷಕರ ಸಂಘಟನೆಯಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಸಂಘಟನೆ, ಹೋರಾಟ ಮೂಲಕವೇ ಶಿಕ್ಷಕರ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಪದವೀಧರರ ತೊಂದರೆಗಳಿಗೂ ಸ್ಪಂದನೆ ಮಾಡುವ ಬದ್ಧತೆ ತಮ್ಮಲ್ಲಿದೆ ಎಂದರು.

ಸರ್ಕಾರ ನೇಮಿಸಿಕೊಳ್ಳುವ ಎಲ್ಲ ತಾತ್ಕಾಲಿಕ ನೇಮಕಾತಿಯಲ್ಲಿ ನಿವೃತ್ತರೇ ಇದ್ದಾರೆ. ಈ ಸ್ಥಳಗಳಲ್ಲಿ ನಿರುದ್ಯೋಗಿ ಪದವೀಧರರನ್ನು ನೇಮಿಸುವುದು, ನಿರುದ್ಯೋಗಿ ಪದವೀಧರರಿಗೆ ಸುಸ್ಥಿರ ಕೃಷಿಗೆ ತೊಡಗಿಕೊಳ್ಳಲು ಸುಸ್ಥಿರ ನೆರವು ಯೋಜನೆ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕುವುದು, ಪದವೀಧರ ಸಹಕಾರಿ ಸಂಘಗಳ ಸ್ಥಾಪನೆ, ಸೀಶಕ್ತಿ ಸಂಘಗಳ ಮಾದರಿಯಲ್ಲಿ ಪದವೀಧರ ಸ್ವಹಾಯ, ಸ್ವಉದ್ಯೋಗ ಸಂಘಗಳ ಸ್ಥಾಪನೆ ಹೀಗೆ ಅನೇಕ ಯೋಜನೆಗಳನ್ನು ಇಟ್ಟುಕೊಂಡಿರುವುದು ಹೇಳಿದರು.

ಹುಬ್ಬಳ್ಳಿಯ ನೆಹರು ಕಾಲೇಜು, ಕುಂದಗೋಳ ಪ್ರಥಮ ದರ್ಜೆ ಕಾಲೇಜು, ಹರ್ಬಟ್ ಕಾಲೇಜಿನಲ್ಲಿ ಗುರಿಕಾರ ಪ್ರಚಾರ ನಡೆಸಿದರು. ಸಂಶಿಯಲ್ಲಿ ಪದವೀಧರರಿಂದ ಅಹವಾಲು ಸ್ವೀಕರಿಸಿದರು. ಶಿಗ್ಗಾವಿಯ ಎಪಿಎಂಸಿ ಬಳಿ ಸಹ ಪದವೀಧರರ ಸಮಸ್ಯೆಗಳ ಪಟ್ಟಿ ನೀಡಿದರು. ಈ ಸಂದರ್ಭದಲ್ಲಿ ಎನ್.ಎ-. ನದಾಫ, ಶಂಕರ ಸಾವೂರ, ರಾಘು ನರಗುಂದ, ನಾಗರಾಜ ಉಣಕಲ್ ಮತ್ತಿತರರು ಇದ್ದರು. ಅಲ್ಲದೇ, ಗುರಿಕಾರ ಅವರ ಪರವಾಗಿ ಧಾರವಾಡ, ಹಾವೇರಿ, ಶಿರಸಿ, ಕಾರವಾರ ಮತ್ತಿತರ ಕಡೆಗಳಲ್ಲಿ ವಿವಿಧ ತಂಡಗಳು ಪ್ರಚಾರ ಮಾಡಿದವು.


Spread the love

Leave a Reply

Your email address will not be published. Required fields are marked *

You may have missed