ನಾಳೆ ಹುಬ್ಬಳ್ಳಿ-ಧಾರವಾಡ ಬಂದ್ ಅಷ್ಟಕಷ್ಟೇ…! ಕಾಟಾಚಾರಕ್ಕೆ ನಡೆಯಲಿದೆಯಷ್ಟೇ.. !

ಹುಬ್ಬಳ್ಳಿ: ಮರಾಠಾ ನಿಗಮ ಮಾಡಿದ್ದನ್ನ ವಿರೋಧಿಸಿ ಬೆಂಗಳೂರಿನ ಕನ್ನಡಪರ ಸಂಘಟನೆಗಳು ನೀಡಿರುವ ಬಂದಗೆ ಹುಬ್ಬಳ್ಳಿ-ಧಾರವಾಡದಲ್ಲಿ ಯಾವುದೇ ರೀತಿಯ ಬೆಂಬಲ ಸಿಗದೇ ಇರುವ ಪರಿಣಾಮ, ಕೆಲವರು ಪ್ರತಿಭಟನೆ ಮಾಡಿ ಸುಮ್ಮನಾಗುವ ಲಕ್ಷಣಗಳು ಕಂಡು ಬಂದಿದ್ದು, ಬಂದ್ ಆಗುವುದೇ ಇಲ್ಲ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಬಂದ್ ಗೆ ಕರೆ ನೀಡಿರುವ ವಾಟಾಳ ಪಕ್ಷದ ವಾಟಾಳ ನಾಗರಾಜ ಸೇರಿದಂತೆ ಹಲವರು ಹುಬ್ಬಳ್ಳಿ-ಧಾರವಾಡದಲ್ಲಿ ಕೆಲವರೊಂದಿಗೆ ಮಾತನಾಡಿರುವ ಪ್ರಸಂಗ ನಡೆದರೂ, ಯಾರೂ ಬಂದ್ ಗೆ ಪೂರಕವಾಗಿ ನಡೆದುಕೊಂಡಿಲ್ಲವೆಂದು ಹೇಳಲಾಗಿದೆ. ಹೀಗಾಗಿ ನಾಳೆ ಬಂದ್ ನಡೆಯುವುದು ಡೌಟ್.
ಮರಾಠಾ ನಿಗಮ ಮಾಡಿರುವುದಕ್ಕೆ ಪರ-ವಿರೋಧಗಳು ಕೇಳಿ ಬಂದವು. ಇದೇ ಕಾರಣಕ್ಕೆ ಹಲವರು ಕನ್ನಡಪರ ಸಂಘಟನೆಗಳನ್ನ ರೋಲ್ ಕಾಲ್ ಮಾಡುವವರು ಎಂದು ಹೀಯಾಳಿಸಿದರು. ಅದರ ವಿರುದ್ಧ ಪ್ರತಿಭಟನೆಯೂ ನಡೆಯಿತು. ಆದರೆ, ಬಂದ್ ಗೆ ಬೆಂಬಲ ನೀಡಲು ಅವಳಿನಗರದ ಬಹುತೇಕರು ಹಿಂದೆ ಸರಿದಿದ್ದಾರೆಂದು ಹೇಳಲಾಗುತ್ತಿದೆ.
ಇದೇಲ್ಲದರ ನಡುವೆಯೂ ಅವಳಿನಗರದಲ್ಲಿ ನಾಳೆ ನಡೆಯುವ ಬಂದ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಕಾವಲು ನಿಯೋಜನೆಯಾಗಲಿದೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡುವ ಸಾಧ್ಯತೆಯಿದೆ.