ತಲ್ವಾರ ಜಳಪಳಿಸಿದ ಭಾಗಪ್ಪ ಹರಿಜನ: ಕತ್ತರಿಸಿದ್ದ ವೀಡಿಯೋ ಸಮೇತ ವರದಿ..!
ವಿಜಯಪುರ: ಭೀಮಾ ತೀರದ ಚಂದಪ್ಪ ಹರಿಜನನ ಸೋದರ ಸಂಬಂಧಿಯಾಗಿರುವ ಬಾಗಪ್ಪ ಹರಿಜನ ಹೊಸ ಅವತಾರದ ವೀಡಿಯೊಂದು ವೈರಲ್ ಆಗಿದ್ದು, ಬಾಗಪ್ಪನ ತಲ್ವಾರ ಮೋಹ ಇನ್ನೂ ಹೆಚ್ಚಾಗಿದೆ ಎಂಬುದನ್ನ ತೋರಿಸುವಂತ ವೀಡಿಯೋವದು.
ಇಲ್ಲಿದೆ ನೋಡಿ ವೀಡಿಯೋ
ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಬಬಲಾದ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಭಾಗಪ್ಪ ಹರಿಜನ ವಿಶೇಷವಾದ ಪೂಜೆಯನ್ನ ಸಲ್ಲಿಸಿದ್ದಾನೆ. ಅಲ್ಲಿ ತಲವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡನ್ನ ಕತ್ತರಿಸಿ, ದೇವಿಗೆ ಅರ್ಪಣೆ ಮಾಡಿದ್ದಾನೆ.
ಬಾಗಪ್ಪನ ಮನೆ ದೇವರಾದ ಬಬಲಾದಿಯ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಬಳಿಕ ತಲವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆದಿಂಡನ್ನು ಕೊಚ್ಚಿದ ಬಾಗಪ್ಪ, ದೇವಿಗೆ ನಮನ ಮಾಡಿದ್ದಾನೆ. ಮಕ್ಮಲ್ ಟೋಪಿ, ಬಿಳಿ ಧೋತಿ, ಬಿಳಿ ಶಲ್ಯದಲ್ಲಿ ವಿಶೇಷ ವಸ್ತ್ರದಲ್ಲಿ ಬಾಗಪ್ಪ ಕಂಡು ಬಂದಿದ್ದಾನೆ.
ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದ ಬಾಗಪ್ಪ, ಸದ್ಯ ಜಾಮೀನು ಪಡೆದು ಹೊರ ಬಂದಿದ್ದಾನೆ.