ಎಟಿಎಂ ಲೂಟಿ ಮಾಡಿದ ಖದೀಮರು: ವಿಜಯಪುರದ ತಂಡವೇ ಇಲ್ಲಿ ಸಕ್ಸ್ ಸ ಆಯಿತಾ..?
ಕಲಬುರಗಿ: ವಿಜಯಪುರ ಜಿಲ್ಲೆಯಲ್ಲಿ ಎರಡು ಎಟಿಎಂ ಕಳ್ಳತನ ಪ್ರಕರಣಗಳು ವಿಫಲಗೊಂಡ ಬೆನ್ನಲ್ಲೆ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಎಟಿಎಂ ದೋಚುವಲ್ಲಿ ಖದೀಮರು ಯಶಸ್ವಿಯಾಗಿದ್ದು, ಲಕ್ಷಾಂತರ ರೂಪಾಯಿ ಕಳ್ಳತನವಾಗಿರುವ ಶಂಕೆಯಿದೆ.
ನಿನ್ನೆ ತಡರಾತ್ರಿ ಎಟಿಎಂನ್ನ ಕಬ್ಬಿಣದ ರಾಡ್ ನಿಂದ ಒಡೆದು ಲಕ್ಷಾಂತರ ರೂಪಾಯಿ ದೋಚಲಾಗಿದೆ. ಆಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ನಿಖರವಾಗಿ ಎಷ್ಟು ಹಣವಿತ್ತು ಎಂಬುದು ಇನ್ನೂ ಗೊತ್ತಾಗಿಲ್ಲ.
ಎಟಿಎಂನಲ್ಲಿ ಸಿಸಿಟಿವಿ ಕ್ಯಾಮರಾಗಳು ಇಲ್ಲ ಜೊತೆಗೆ ಸೆಕ್ಯುರಿಟಿಯೂ ಇಲ್ಲದ್ದನ್ನ ನೋಡಿಯೇ ಇಂತಹ ಕೃತ್ಯವೆಸಗಲಾಗಿದೆ. ಆಳಂದ ಠಾಣೆ ಪೊಲೀಸರು ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಮಾಹಿತಿ ಲಭಿಸಿಲ್ಲ.
ಕಳೆದ ವಾರ ವಿಜಯಪುರದ ಎರಡು ಕಡೆ ಎಟಿಎಂ ಕಳ್ಳತನ ನಡೆದಿತ್ತು. ಸಿಂದಗಿಯಲ್ಲಿ ಸೆಕ್ಯುರಿಟಿಯನ್ನ ಕೊಲೆ ಮಾಡಿ, ಅಲ್ಲಿಯೂ ಹಣ ದೋಚುವ ವಿಫಲ ಯತ್ನ ನಡೆಸಿದ್ದರು. ಅದೇ ಗ್ಯಾಂಗ್ ಇಲ್ಲಿ ಕಳ್ಳತನ ಮಾಡಿದೇಯಾ ಎಂಬುದನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ.