ಅಟಲ್ ಇದ್ದಿದ್ದರೂ ಹೀಗೆ ಮಾಡುತ್ತಿರಲಿಲ್ಲಾ: ಪ್ರತಿಭಟನೆಯಿಂದ ಎಚ್ಚರಗೊಂಡ ಬಿಜೆಪಿ..
1 min readಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನದ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಅಮರಗೋಳ ಗ್ರಾಮದ ಬಳಿ ನಡೆಯುತ್ತಿದ್ದ ಅಟಲ್ ನಗರ ನಾಮಕರಣ ವಿಷಯ ಗೊಂದಲವನ್ನ ಸೃಷ್ಟಿಯಾದ ಘಟನೆ ನಡೆದಿದ್ದು, ಇದಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಯಿತು.
ಅಮರಗೋಳ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ, ನಗರ ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ನಿರ್ಮಿಸಲಿರುವ ಬಿ” ಮಾದರಿ ಮನೆಗಳ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಹಾಗೂ ಅಟಲ್ ನಗರ ನಾಮಕರಣ ಕಾರ್ಯಕ್ರಮವಿದೆ ಎಂದು ಹೇಳಲಾಗಿತ್ತು. ಇದನ್ನ ಖಂಡಿಸಿ ಕಾಂಗ್ರೆಸ್ ಹೋರಾಟ ಆರಂಭಿಸುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಆಗಮಿಸಿ, ನಾವೂ ಮಹಾತ್ಮಾ ಗಾಂದೀಜಿನಗರದ ಹೆಸರನ್ನ ಬದಲಾವಣೆ ಮಾಡುವುದಿಲ್ಲವೆಂದು ಹೇಳಿದರು.
ಭಾರತೀಯ ಜನತಾ ಪಕ್ಷದ ವಿರುದ್ಧ ನಾಗರಾಜ ಗೌರಿ ನೇತೃತ್ವದಲ್ಲಿ ನಡೆದ ಹೋರಾಟದ ಸ್ಥಳಕ್ಕೆ ಆಗಮಿಸಿದ ಶಾಸಕ ಅರವಿಂದ ಬೆಲ್ಲದ ಕೂಡಾ, ಅಟಲನಗರ ಹೆಸರಿಡುತ್ತಿಲ್ಲವೆಂದು ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ನಾಗರಾಜ ಗೌರಿ, ಮಾತನಾಡಿ, ಮಹಾತ್ಮಾಗಾಂಧಿಯವರ ಹೆಸರನ್ನ ಬದಲಾವಣೆ ಮಾಡಲು ಬಿಡುವುದಿಲ್ಲವೆಂದು ಹೇಳಿದರು.
20 ಎಕರೆ ಜಮೀನಿನಲ್ಲಿ ಮೊದಲಿನ ಹೆಸರು ಇರಲಿ. ಬೇಕಿದ್ದರೇ ಬೇರೆ ಜಾಗದಲ್ಲಿ ಮೋದಿನಗರ, ಅರವಿಂದನಗರ ಮಾಡಿ ಎಂದು ಹೇಳಿದಾಗ, ಅಲ್ಲಿಂದ ಶಾಸಕರು ನಡೆದರು.
ಉದ್ಘಾಟನೆ ಸಮಯದಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದಂತೆ ಡಿಸಿಪಿ ರಾಮರಾಜನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬಂದೋಬಸ್ತ್ ನಿಯೋಜನೆ ಮಾಡಿದ್ದರು.