ಬೈರಗೊಂಡ ಆಸ್ಪತ್ರೆ ಶಿಫ್ಟ್; 7 ಹಂತಕರ ಬಂಧನ- ನುಡಿದಂತೆ ನಡೆದ ಐಜಿಪಿ ರಾಘವೇಂದ್ರ ಸುಹಾಸ
1 min readವಿಜಯಪುರ: ಭೀಮಾ ತೀರದ ನೆಲದಲ್ಲಿ ರಕ್ತಸಿಕ್ತ ವಾತಾವರಣ ಮೂಡಲು ಮತ್ತೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನರನ್ನ ಬಂಧನ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಾದೇವ ಸಾವುಕಾರನಿಗೆ ಮತ್ತೆ ಪ್ರಾಣ ಭಯದಿಂದ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.
ಕಳೆದ ಆರು ದಿನಗಳ ಹಿಂದೆ ನಡೆದಿದ್ದ ಭೀಮಾತೀರದ ಮಹಾದೇವ ಬೈರಗೊಂಡ ಅಲಿಯಾಸ್ ಮಹದೇವ ಸಾಹುಕಾರನ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಜನರನ್ನ ಬಂಧನ ಮಾಡಲಾಗಿದೆ. ಅತಾಲಟ್ಟಿ ಗ್ರಾಮದ ಯಾಶೀನ್ ದಂದರಗಿ, ಗೂಳಿ ಸೊನ್ನದ , ಸಿದ್ದರಾಯ ಬೊಮ್ಮನಜೋಗಿ, ಅಲಿಯಾಬಾದ ಗ್ರಾಮದ ಸಚಿನ ಮಾನವರ ಹಾಗೂ ಚಡಚಣದ ರವಿ ಬಂಡಿ ಸೇರಿದಂತೆ ಟಿಪ್ಪರ್ ಚಾಲಕ ಉಮರಾಣಿಯ ನಾಗಪ್ಪ ಪೀರಗೊಂಡ, ಸಾಹುಕಾರ್ ಬಗ್ಗೆ ಮಾಹಿತಿ ನೀಡಿದ ವಿಜಂತು ತಾಳಿಕೋಟೆ ಬಂಧಿಸಲಾಗಿದೆ.
ಹತ್ಯೆಗೆ ಬಳಿಸಿದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡು, 4 ಮೊಬೈಲ್, 1 ಆಟೋ ರಿಕ್ಷಾ, 1 ಮಚ್ಚು ವಶಕ್ಕೆ ಪಡೆಯಲಾಗಿದ್ದು, ಗ್ಯಾಂಗ್ ಕಟ್ಟಿಕೊಳ್ಳುವ ಖಯಾಲಿಯಿಂದಾಗಿ ಈ ಕೃತ್ಯಗೈದಿದ್ದು, ಪ್ರಮುಖವಾಗಿ ಗ್ಯಾಂಗ್ ಕೆಟ್ಟಬೇಕೆಂಬ ಮೋಹದಿಂದಾಗಿ ಮಡಿವಾಳ ಹಿರೇಮಠ ಸ್ವಾಮಿ ಎನ್ನುವ ಕೇಂದ್ರ ವ್ಯಕ್ತಿಯಾಗಿದ್ದ ಎಂದು ಮಾಹಿತಿಯನ್ನ ನೀಡಿದ್ರು.
ಐಜಿಪಿ ರಾಘವೇಂದ್ರ ಸುಹಾಸ ಒಂದೇ ವಾರದಲ್ಲಿ ಈ ಪ್ರಕರಣವನ್ನ ಭೇದಿಸುವುದಾಗಿ ಶೂಟೌಟ್ ನಡೆದ ಮರುದಿನವೇ ಹೇಳಿದ್ದು, ಅದನ್ನೀಗ ಸಾಧಿಸಿ ತೋರಿಸಿದ್ದಾರೆ.
ಈ ನಡುವೆ ಗಾಯಾಳು ಮಹದೇವ ಬೈರಗೊಂಡನನ್ನ ಖಾಸಗಿ ಆಸ್ಪತ್ರೆಯಿಂದ ಬೇರೆ ಕಡೆ ಸ್ಥಳಾಂತರ ಮಾಡಲಾಗಿದ್ದು, ಯಾವ ಆಸ್ಪತ್ರೆ ಎಂಬುದನ್ನ ಗುಪ್ತವಾಗಿಡಲಾಗಿದೆ. ಆಸ್ಪತ್ರೆಯಲ್ಲಿದ್ದಾಗಲೂ ದಾಳಿ ನಡೆಯುವ ಸಾಧ್ಯತೆಯ ಮೇರೆಗೆ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯಿದೆ.