ಎಪಿಎಂಸಿ ಪೊಲೀಸರಿಂದ ಬಂಧಿತ: ವಕೀಲ ವಿನೋದ ಪಾಟೀಲರಿಗೆ ಮಧ್ಯಂತರ ಜಾಮೀನು
1 min readಹುಬ್ಬಳ್ಳಿ: ನವನಗರದ ಎಪಿಎಂಸಿ ಠಾಣೆಯಲ್ಲಿನ ಗೊಂದಲ ಪೊಲೀಸರು ಹಾಗೂ ವಕೀಲರ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ಇದೀಗ ಪ್ರಕರಣ ಬೇರೆಯದ್ದೇ ಸ್ವರೂಪ ಪಡೆಯುತ್ತದೆ ನಡೆಯುತ್ತಿದೆ. ಈ ನಡುವೆ ಪೊಲೀಸರಿಂದ ಬಂಧಿತರಾಗಿದ್ದ ವಕೀಲರಿಗೆ ಮಧ್ಯಂತರ ಜಾಮೀನು ದೊರಕಿದೆ.
ನವನಗರದ ವಿನೋದ ಪಾಟೀಲ ಅವರನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಬಂಧನ ಮಾಡಿ, ಅವರ ವಿರುದ್ಧ 353 ಕೇಸ್ ಹಾಕಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಸಮಯದಲ್ಲಿ ಅವರ ಕೈಗೆ ಕೊಳ ಹಾಕಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು, ಕೂಡಾ.
ಈ ಘಟನೆಗೆ ಸಂಬಂಧಿಸಿದಂತೆ ವಿನೋದ ಪಾಟೀಲರಿಗೆ ಮಧ್ಯಂತರ ಜಾಮೀನು ದೊರಕಿದ್ದು, ಇನ್ನುಳಿದಂತೆ ಪ್ರಕರಣ ಮುಂದುವರೆದಿದೆ. ಕಳೆದ ನಾಲ್ಕು ದಿನದ ಹಿಂದೆ ವಕೀಲ ವಿನೋದ ಪಾಟೀಲ ಸೇರಿದಂತೆ ಮೂವರನ್ನ ಬಂಧನ ಮಾಡಿದ ಪ್ರಕರಣ ಹಲವೂ ರೀತಿಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ.
ಈಗಾಗಲೇ ಕಾಂಗ್ರೆಸ್ ಮುಖಂಡ ಮಲ್ಲಯ್ಯ ಹಿರೇಮಠ ಹಾಗೂ ರೌಡಿ ಷೀಟರ್ ಪ್ರವೀಣ ಪೂಜಾರಿ ಪರವಾಗಿಯೂ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ. ಅವಳಿನಗರದಲ್ಲಿ ಈ ಪ್ರಕರಣ ಸಾಕಷ್ಟು ಸದ್ದು ಮಾಡಿರುವುದಂತೂ ಹೌದು.