Posts Slider

Karnataka Voice

Latest Kannada News

ತಮಾಟಗಾರ V/S ಕಳ್ಳಿಮನಿ: ಜಿದ್ದಾಜಿದ್ದಿ ಪರೀಕ್ಷೆಗೆ ಡೇಟ್ ಫಿಕ್ಸ್

1 min read
Spread the love

ಧಾರವಾಡ: ತೀವ್ರ ಹಣಾಹಣಿಗೆ ಕಾರಣವಾಗಿದ್ದ ಧಾರವಾಡ ಅಂಜುಮನ್ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 31ರಂದು ನಡೆಯಲಿದ್ದು, ಮಾಜಿ ಅಧ್ಯಕ್ಷ ಇಸ್ಮಾಯಿಲ ತಮಟಾಗಾರ ಹಾಗೂ ಇಮ್ರಾನ ಕಳ್ಳಿಮನಿಯವರ ನಡುವಿನ ಶೀತಲ ಸಮರಕ್ಕೆ ಫಲಿತಾಂಶ ನಾಂದಿ ಹಾಡಲಿದೆ.

ಕಳೆದ ಎರಡು ಅವಧಿಗೆ ಅಂಜುಮನ್ ಅಧ್ಯಕ್ಷರಾಗಿದ್ದ ಇಸ್ಮಾಯಿಲ ತಮಾಟಗಾರ, ಈ ಬಾರಿ ತಮ್ಮ ಬೆಂಬಲಿಗರ ಮೂಲಕ ಅಂಜುಮನ ಗದ್ದುಗೆಯೇರಲು ಹವಣಿಸಿದ್ದರು. ಇದಕ್ಕೆ ಎದೆಕೊಟ್ಟು ನಿಂತಿದ್ದು ಇಮ್ರಾನ ಕಳ್ಳಿಮನಿ. ಸಮುದಾಯದಲ್ಲಿ ಹೊಸ ಅಭಿಲಾಷೆಯೊಂದಿಗೆ ಚುನಾವಣೆಗೆ ಇಳಿದಿದ್ದ ಇಮ್ರಾನ ಕಳ್ಳಿಮನಿ, ಅಂಜುಮನ್ ಎಲೆಕ್ಷನದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದರು.

ಬೋಧನೆ, ಕಲಿಕೆ-ಸಮುದಾಯ ರಕ್ಷಣೆ- ಅಭಿವೃದ್ಧಿ ಮತ್ತು ಹೆಚ್ಚು ಸೌಲಭ್ಯಗಳ ಕಲ್ಪನೆಯೊಂದಿಗೆ ಅಂಜುಮನ್ ಚುನಾವಣೆಗೆ ಇಳಿದಿದ್ದ ಇಮ್ರಾನ್ ಪಡೆ, ಕಾಂಪ್ಲೆಕ್ಸ್ ನಿರ್ಮಾಣ ಮತ್ತು ಹಣ ಗಳಿಕೆಯ ಬಗ್ಗೆ ಮಾತನಾಡುವವರ ಬಗ್ಗೆ ತಾತ್ಸಾರ ಮನೋಭಾವನೆ ಮೂಡುವ ಹಾಗಾಗಿತ್ತು.

ಮಾರ್ಚ 8 ರಂದು ನಡೆದಿದ್ದ ಅಂಜುಮನ್ ಚುನಾವಣೆಯಲ್ಲಿ ಪ್ರಮುಖ ರಾಜಕಾರಣಿಯೋರ್ವರ ಬೆಂಬಲದಿಂದ ಸ್ಪರ್ಧೆ ಮಾಡಿದ್ದ ಕಳ್ಳಿಮನಿ, ಗೆಲ್ಲುವ ನಿರೀಕ್ಷೆಯನ್ನ ಹೊಂದಿದ್ದಾರೆ. ಮತ ಎಣಿಕೆಯ ವಿಷಯ ನ್ಯಾಯಾಲಯಕ್ಕೆ ಹೋಗಿದ್ದರಿಂದ ಏಳು ತಿಂಗಳ ನಂತರ ಎಣಿಕೆಗೆ ಗ್ರೀನ್ ಸಿಗ್ನಲ್ ದೊರಕಿದೆ.

ಅಂಜುಮನ ಇಸ್ಲಾಂ ಸಂಸ್ಥೆಯ ಚುನಾವಣೆಯಲ್ಲಿ ಇಸ್ಮಾಯಿಲ ತಮಾಟಗಾರ ಕಣದಲ್ಲಿ ಇಲ್ಲದಿದ್ದರೂ, ಚುನಾವಣೆ ಮಾತ್ರ ಇಮ್ರಾನ ಕಳ್ಳಿಮನಿ ವರ್ಸಸ್ ಇಸ್ಮಾಯಿಲ ತಮಾಟಗಾರ ಎನ್ನುವಂತೆ ನಡೆದಿದೆ. ಹೀಗಾಗಿಯೇ ಈಗ ಎಲ್ಲರ ಕಣ್ಣು ಫಲಿತಾಂಶದ ದಿನದತ್ತ ನೆಡುವಂತಾಗಿದೆ.

ಚುನಾವಣೆ ವೇಳೆಯಲ್ಲಿ ಹಲವು ಉದ್ಯೋಗಿಗಳು ಹಾಗೂ ಅಂಜುಮನ್ ಸಂಸ್ಥೆಯ ಏಳಿಗೆಯನ್ನ ಬಯಸುವ ಅನೇಕರು ಇಮ್ರಾನ್ ಕಳ್ಳಿಮನಿಗೆ ಬೆಂಬಲವಾಗಿ ನಿಂತಿದ್ದನ್ನ ಇಲ್ಲಿ ಸ್ಮರಿಸಬಹುದು.


Spread the love

Leave a Reply

Your email address will not be published. Required fields are marked *

You may have missed