ಹಾವೇರಿ: ದೇವಸ್ಥಾನ ಹುಂಡಿಯನ್ನೇ ಎಗರಿಸಿದ ಖದೀಮರು
ಹಾವೇರಿ: ಆಂಜನೇಯ ವಾರದ ಮುನ್ನಾದಿನವೇ ಆಂಜನೇಯ ದೇವಸ್ಥಾನದ ಹುಂಡಿಯನ್ನ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮೇದುರಿನಲ್ಲಿ ನಡೆದಿದೆ.
ಕಳೆದ ರಾತ್ರಿ ಒಳ ನುಗ್ಗಿರುವ ಕಳ್ಳರು, ಹುಂಡಿಯನ್ನ ಕಿತ್ತುಕೊಂಡು ಊರ ಹೊರವಲಯದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅದನ್ನ ನಂತರ ೊಡೆದು ಹಾಕಿ ಅದರಲ್ಲಿದ್ದ ಹಣವನ್ನ ದೋಚಿಕೊಂಡು ಹುಂಡಿಯನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಹುಂಡಿಯಲ್ಲಿ ಎಷ್ಟು ಹಣವಿತ್ತು ಎಂಬುದು ಗೊತ್ತಾಗಿಲ್ಲವಾದರೂ, ಈ ಮೊದಲಿನಿಂದಲೂ ದೇವಸ್ಥಾನಕ್ಕೆ ಬರುವವರ ಬಗ್ಗೆ ಸಂಶಯವಿದೆ ಎನ್ನಲಾಗಿದೆ. ಈ ಬಗ್ಗೆ ರಟ್ಟಿಹಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
                      
                      
                      
                      
                      