ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಅನಿಲಕುಮಾರ ಪಾಟೀಲ…

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಡಾ.ಚಂದ್ರಶೇಖರ ಗುರೂಜಿ ಹತ್ಯೆಯಾದ ಜಾಗ ಮತ್ತೆ ಇದೀಗ ಸದ್ದು ಮಾಡುತ್ತಿದ್ದು, ಅದನ್ನ ಗುರುತಿಸುವ ಚಾಲೆಂಜ್ ನ್ನ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ನೀಡಿದ್ದಾರೆ.

ಹುಬ್ಬಳ್ಳಿಯ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಕೂತು ವೀಡಿಯೋ ಮಾಡಿಸಿಕೊಂಡಿರುವ ಅನಿಲಕುಮಾರ ಪಾಟೀಲ ಅವರು, ಅದನ್ನ ಸೆಪ್ಟೆಂಬರ್ 8ರಂದು ಅಪ್ಲೋಡ್ ಮಾಡಿದ್ದು, ಅದನ್ನ ಮತ್ತೆ ಇಂದು ಶೇರ್ ಮಾಡಿಕೊಂಡಿದ್ದಾರೆ.
ಹಾಡುಹಗಲೇ ನಡೆದ ಕೊಲೆಯಿಂದ ಅವಳಿನಗರ ಬೆಚ್ಚಿಬಿದ್ದು, ಪ್ರೆಸಿಡೆಂಟ್ ಹೊಟೇಲನಲ್ಲಿ ಹೋಮ ಹವನಗಳು ನಡೆದಿದ್ದವು. ಇದೀಗ ಪಾಟೀಲರ ಮೂಲಕ ಮತ್ತೆ ಹತ್ಯೆ ಸ್ಥಳ ಸದ್ದು ಮಾಡತೊಡಗಿದೆ. ಇದಕ್ಕೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡಿದ್ದಾರೆ.