ಹುಬ್ಬಳ್ಳಿ ಜನತಾ ಬಜಾರಲ್ಲಿ ಅಂದರ್-ಬಹಾರ್- ಹೆಡಮುರಿಗೆ ಕಟ್ಟಿದ ಪೊಲೀಸ್ರು…!

ಹುಬ್ಬಳ್ಳಿ: ಜನತಾ ಬಜಾರಿನಲ್ಲಿನ ವಿಜಯ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಅಂದರ್-ಬಾಹರ್ ಆಡುತ್ತಿದ್ದ ತಂಡದ ಮೇಲೆ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿದ್ದು, ಹಲವರನ್ನ ಬಂಧನ ಮಾಡಿದ್ದಾರೆ.

ಜನತಾ ಬಜಾರ್ ಬಂದ್ ಆದ ಮೇಲೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಇದನ್ನೇ ಅವಕಾಶ ಮಾಡಿಕೊಂಡ ಜೂಜುಕೋರರು, ಅಂದರ್-ಬಾಹರ್ ನಲ್ಲಿ ತೊಡಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿರುವ ಪೊಲೀಸರು, ಹಲವರನ್ನ ಬಂಧನ ಮಾಡಿದ್ದಾರೆ.
ಹುಬ್ಬಳ್ಳಿ ಉಪನಗರ ಠಾಣೆಯ ಇನ್ಸಪೆಕ್ಟರ್ ರವಿಚಂದ್ರ ಬಡಪಕ್ಕೀರಪ್ಪನವರ ನೇತತೃತ್ವದಲ್ಲಿ ನಡೆದಿರುವ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಸಿಕ್ಕಿಬಿದ್ದಿದ್ದು, ಹಲವರನ್ನ ವಿಚಾರಣೆ ಮಾಡಲಾಗುತ್ತಿದೆ. ಸಿಕ್ಕಿರುವ ಹಣ, ಬೈಕ್ ಗಳ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದೆ.

ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಮತ್ತೆ ಅಂದರ್-ಬಾಹರ್ ತಲೆ ಎತ್ತಿರುವುದನ್ನ ಖಚಿತ ಪಡಿಸಿಕೊಂಡು ನಡೆದಿರುವ ದಾಳಿಯಲ್ಲಿ ಪ್ರಮುಖರು ಸಿಕ್ಕಿ ಬಿದ್ದಿದ್ದು, ವಿವರ ಹೊರಬರಬೇಕಾಗಿದೆ.