AIMIM ಮಹಾನಗರ ಅಧ್ಯಕ್ಷರಾಗಿ ನಜೀರಅಹ್ಮದ ಹೊನ್ಯಾಳ ನೇಮಕ
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ದೂರವಾಗಿ ಅಖಿಲ ಭಾರತ ಮಜ್ಲೀಸೇ ಇತ್ತೆಹಾದುಲ್ ಮುಸ್ಲೀಮಿನ್ ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರನ್ನಾಗಿ ನಜೀರಅಹ್ಮದ ಹೊನ್ಯಾಳ ಅವರನ್ನ ನೇಮಕ ಮಾಡಿ, ಆದೇಶ ಹೊರಡಿಸಲಾಗಿದೆ.
ಎಐಎಂಐಎಂ ಪಕ್ಷದ ಕರ್ನಾಟಕದ ಅಧ್ಯಕ್ಷ ಉಸ್ಮಾನಗನಿ ಹುಮನಾಬಾದ್ ಅವರು ನಜೀರ ಹೊನ್ಯಾಳ ಅವರನ್ನ ನೇಮಕ ಮಾಡಿ, ಆದೇಶವನ್ನ ನೀಡಿದ್ದು ಪಕ್ಷದ ಸಂಘಟನೆಗಾಗಿ ಶಿಸ್ತುಬದ್ಧವಾಗಿ ಮುನ್ನಡೆಯಬೇಕೆಂದು ಹೇಳಿದ್ದಾರೆ.
ಮಹಾನಗರ ಅಧ್ಯಕ್ಷರಾಗಿರುವ ನಜೀರ ಹೊನ್ಯಾಳ ಇದೇ ಸಮಯದಲ್ಲಿ ಮಾತನಾಡಿ, ಮಹಾನಗರದಲ್ಲಿ ಪಕ್ಷವನ್ನ ಬಲಪಡಿಸುವುದಾಗಿ ಭರವಸೆ ನೀಡಿದ್ದು, ಹಲವು ಪಕ್ಷಗಳಿಂದ ಪ್ರಮುಖರು ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆಂಬುದನ್ನ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆಯಲ್ಲಿದ್ದ ನಜೀರಅಹ್ಮದ ಹೊನ್ಯಾಳ, ಎಐಎಂಐಎಂ ಪಕ್ಷಕ್ಕಾಗಿ ಶ್ರಮಿಸಲಿದ್ದು, ಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಲವರನ್ನ ಕಣಕ್ಕೀಳಿಸುವ ಭರವಸೆಯನ್ನ ಹೊಂದಿದ್ದಾರೆನ್ನುವುದು ಗೊತ್ತಾಗಿದೆ.