ಮೂರು ದಿನ ಅಮಾನತ್ತಿಗೆ- ಆರು ದಿನ ಮುತ್ತಿಗೆಗೆ ಗಡುವು ನೀಡಿದ ವಕೀಲರ ಸಂಘ
1 min readಧಾರವಾಡ: ಹುಬ್ಬಳ್ಳಿ ನವನಗರ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ ಹಾಗೂ ಇನ್ನುಳಿದ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುವಂತೆ ಇಂದು ಮಧ್ಯಾಹ್ನ ಎರಡು ಗಂಟೆಯವರೆಗೆ ಸಮಯ ನೀಡಿದ್ದ ಧಾರವಾಡ ವಕೀಲರ ಸಂಘ, ಮತ್ತೆ ಮೂರು ದಿನ ಮತ್ತು ಆರು ದಿನದ ಗಡುವು ನೀಡಿ, ಠರಾವು ಹೊರಡಿಸಿದೆ.
ನವನಗರದ ನಿವಾಸಿಯಾಗಿರುವ ವಕೀಲರ ಸಂಘದ ಸದಸ್ಯ ವಿನೋದ ಪಾಟೀಲ ಬಂಧನ ಖಂಡಿಸಿ, ವಕೀಲರು ಮತ್ತೂ ಪೊಲೀಸರ ನಡುವೆ ನಡೆಯುತ್ತಿರುವ ಶೀತಲಸಮರ ಮುಂದುವರೆದಿದ್ದು, ಇನ್ಸಪೆಕ್ಟರ್ ಪ್ರಭು ಸೂರಿನ್ ಅಮಾನತ್ತು ಮಾಡಬೇಕೆಂಬ ವಕೀಲರ ಒತ್ತಾಯ ಮುಂದುವರೆದಿದೆ.
ಇಂದಿನ ಗಡುವು ಮುಗಿದ ಮೇಲೆ ಮತ್ತೆ ಡಿಸೆಂಬರ್ 4ರ ವರೆಗೆ ಗಡುವು ನೀಡಿರುವ ವಕೀಲರ ಸಂಘ, ಆ ವರೆಗೆ ಅಮಾನತ್ತು ಮಾಡದೇ ಇದ್ದರೇ ಡಿಸೆಂಬರ್ 7ರಂದು ಪೊಲೀಸ್ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ತೀರ್ಮಾನ ತೆಗೆದುಕೊಂಡಿದ್ದಾರೆಂದು ಠರಾವಿನಲ್ಲಿ ನಮೂದು ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಇನ್ಸಪೆಕ್ಟರ್ ಪ್ರಭು ಸೂರಿನ್ ಅವರನ್ನ ಪೊಲೀಸ್ ಕಮೀಷನರ್ ಕಚೇರಿಗೆ ವರ್ಗಾವಣೆ ಮಾಡಿಕೊಂಡು, ಎಪಿಎಂಸಿ ಠಾಣೆಗೆ ಸೈಬರ್ ಕ್ರೈಂ ಠಾಣೆಯ ಇನ್ಸಪೆಕ್ಟರ್ ಸತೀಶ ಮಾಳಗೊಂಡರನ್ನ ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲ, ಕೈಕೊಳ ಹಾಕಿದ ಪೊಲೀಸ್ ಪೇದೆಯನ್ನೂ ಅಮಾನತ್ತು ಮಾಡಲಾಗಿದೆ.