ಇನ್ಸಪೆಕ್ಟರ್ ಪ್ರಭು ಸೂರಿನ್ ಒದ್ದು ತಂದು ಅರೆಸ್ಟ್ ಮಾಡಿಸ್ತೇವಿ: ಅಶೋಕ ಅಣ್ವೇಕರ
1 min readಹುಬ್ಬಳ್ಳಿ: ನವನಗರ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ ಅವರನ್ನ ಒದ್ದು ತಂದು ಅರೆಸ್ಟ್ ಮಾಡಿಸುತ್ತೇವೆ ಎಂದು ಹುಬ್ಬಳ್ಳಿ ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ ಅಣ್ವೇಕರ ಗುಡುಗಿದ್ದು, ಕಾನೂನು ಕೈಗೆ ತೆಗೆದುಕೊಳ್ಳುವ ಮುನ್ನವೇ ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಮಾತನಾಡಿರುವ ಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಹುಬ್ಬಳ್ಳಿಯಲ್ಲಿ ನವನಗರ ವಕೀಲರಾದ ವಿನೋದ ಪಾಟೀಲ ಬಂಧನ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ಮಾತನಾಡಿದ ಅಶೋಕ ಅಣ್ವೇಕರ, ನಾವು ನವನಗರ ಪೊಲೀಸ್ ಠಾಣೆಗೆ ಘೇರಾವು ಹಾಕುತ್ತೇವೆ. ಈ ಹೋರಾಟ ಉಗ್ರಸ್ವರೂಪ ತಾಳುವ ಮುನ್ನವೇ ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು.
ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದರೇ, ನಾವೂ ಹೋರಾಟ ಮಾಡುವುದಕ್ಕೆ ಗೃಹ ಸಚಿವರೇ ಕಾರಣವಾಗ್ತಾರೆ ಎಂದು ಹೇಳಿದರು.
ಪ್ರಭು ಸೂರಿನ್ ಅವರನ್ನ ಈ ಜಿಲ್ಲೆಯಿಂದಲೇ ವರ್ಗಾವಣೆ ಮಾಡಬೇಕೆಂದು ವಕೀಲರು ಒತ್ತಾಯಿಸಿದ್ದು, ಪ್ರಕರಣ ಮತ್ತೆ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ.