ನಾಳೆ 2ಗಂಟೆಯೊಳಗೆ ಪಿಐ ಪ್ರಭು ಸೂರಿನ ಅಮಾನತ್ತು ಮಾಡಿ: ವಕೀಲರ ಸಂಘದ ಠರಾವಿನಲ್ಲೇನಿದೆ…!
1 min readಧಾರವಾಡ: ಹುಬ್ಬಳ್ಳಿ ನವನಗರದ ನಿವಾಸಿಯಾಗಿರುವ ವಕೀಲರ ಸಂಘದ ಸದಸ್ಯ ವಿನೋದ ಪಾಟೀಲ ಅವರ ಮೇಲೆ ಸುಳ್ಳು ಕೇಸ್ ಹಾಕಿ ಬಂಧನ ಮಾಡಿರುವ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನರನ್ನ ನಾಳೆ 2ಗಂಟೆಯೊಳಗೆ ಅಮಾನತ್ತು ಮಾಡಬೇಕೆಂದು ಧಾರವಾಡ ಬಾರ್ ಅಸೋಸಿಯೇಷನ್ ಠರಾವು ಮಾಡಿಕೊಂಡಿದೆ.
ಇಂದು ಸಭೆಯಲ್ಲಿ ನಡೆದ ಚರ್ಚೆಗಳ ಮೇಲೆ ಠರಾವು ಹೊರಡಿಸಿರುವ ಸಂಘದ ಅಧ್ಯಕ್ಷ ಬಿ.ಎಸ್.ಗೋಡಸೆ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಆರ್.ಮಟ್ಟಿ, ನಾಳೆ 2 ಗಂಟೆಯೊಳಗೆ ಕ್ರಮ ಜರುಗಿಸದೇ ಇದ್ದರೇ ಮುಂದಿನ ಹೋರಾಟದ ರೂಪುರೇಷೆ ರಚಿಸಲು ನಾಳೆ ಮಧ್ಯಾಹ್ನ 2ಗಂಟೆಗೆ ತುರ್ತು ಸಭೆಯನ್ನ ಕರೆಯಲಾಗಿದೆ ಎಂದು ಠರಾವಿನಲ್ಲಿ ನಮೂದು ಮಾಡಲಾಗಿದೆ.
ಸಭೆಯಲ್ಲಿ ಎರಡು ಪ್ರಮುಖ ಠರಾವುಗಳನ್ನ ತೆಗೆದುಕೊಳ್ಳಲಾಗಿದ್ದು, ವಕೀಲರ ಮೇಲೆ ಸುಳ್ಳು ಪ್ರಕರಣ ಮಾಡಿ ಅವರ ಮೇಲೆ ಹಲ್ಲೆ ಮಾಡಿದ ಹುಬ್ಬಳ್ಳಿಯ ನವನಗರ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಪ್ರಭು ಸೂರಿನ್ ಹಾಗೂ ಇನ್ನುಳಿದ ಅಧಿಕಾರಿಗಳನ್ನ ಕೂಡಲೇ ಸಸ್ಪಂಡ್ ಮಾಡಬೇಕು ಮತ್ತು ಕೂಡಲೇ ಸಿಪಿಐಯನ್ನು ಬಂಧಿಸಬೇಕೆಂದು ನಿರ್ಣಯಿಸಿ ಸರ್ವಾನುಮತದಿಂದ ಠರಾವಿಸಲಾಗಿದೆ ಎಂದು ನಮೂದು ಮಾಡಲಾಗಿದೆ.
ವಕೀಲ ವಿನೋದ ಪಾಟೀಲರ ಬಂಧನ ಹಲವು ರೀತಿಯಲ್ಲಿ ವಿವಾದ ಸೃಷ್ಟಿಯಾಗುತ್ತಿದ್ದು, ಘಟನೆ ಪೊಲೀಸ್ ಮತ್ತು ವಕೀಲರಲ್ಲಿ ಮನಸ್ತಾಪ ಮೂಡಿಸುವತ್ತ ಸಾಗಿದೆ.