ಗೃಹ ಸಚಿವರ ಹುಬ್ಬಳ್ಳಿ ಮನೆ ಮುಂದೆ ಅಪಘಾತ: ತಪ್ಪಿಸಿಕೊಂಡವನು ಸಿಕ್ಕಿದ್ದು ಯಾವ ಮೂಲದಿಂದ..?

ಹುಬ್ಬಳ್ಳಿ: ವಿಜಯನಗರದಲ್ಲಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ನಿಲ್ಲಿಸಿದ್ದ ಬೆಲೆಬಾಳುವ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಹನವನ್ನ ಪತ್ತೆ ಮಾಡುವಲ್ಲಿ ಸಂಚಾರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನ ಬಂಧನ ಮಾಡಿದ್ದಾರೆ.
ವಿಜಯನಗರದಲ್ಲಿ ಉಧ್ಯಮಿ ಎಸ್.ಆರ್.ನಾಯಕ ಮತ್ತು ಮಕ್ಕಳಿಗೆ ಸೇರಿದ ವಾಹನಕ್ಕೆ ಟಾಟಾ ಏಸ್ ಕಳೆದ ರಾತ್ರಿ ಡಿಕ್ಕಿ ಹೊಡೆದು ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದ. ಬೆಳಿಗ್ಗೆ ಎದ್ದು ವಾಹನವನ್ನ ನೋಡಿದ ಮಾಲೀಕರು ಗಾಬರಿಯಾಗಿ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದರು.
ಯಾವುದೇ ಸುಳಿವಿಲ್ಲದೇ ಪರದಾಡುತ್ತಿದ್ದ ಪೊಲೀಸರಿಗೆ ಸಿಸಿಟಿವಿ ಸಾಕ್ಷ್ಯವನ್ನ ನೀಡಿದ್ದು, ಕಾರಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿ ಪರಾರಿಯಾಗಿದ್ದು ಮೊಹ್ಮದನದೀಂ ಕರೀಮಸಾಬ ಕುಸುಗಲ್ ಎಂಬುವವರಿಗೆ ಸೇರಿದ ಕೆಎ-25, ಸಿ-496 ಎಂದು ಗುರುತಿಸಲಾಗಿದೆ.
ದೃಶ್ಯಾವಳಿಗಳಿಂದ ಮಾಹಿತಿ ಕಲೆ ಹಾಕಿ ಟಾಟಾ ಏಸ್ ಚಾಲಕನನ್ನ ಬಂಧನ ಮಾಡಿ, ಕಾನೂನು ಕ್ರಮವನ್ನ ಸಂಚಾರಿ ಠಾಣೆಯ ಪೊಲೀಸರು ಕೈಗೊಂಡಿದ್ದಾರೆ.