ಧಾರವಾಡ: ಎರಡು ಅಪಘಾತ- ವೈಧ್ಯ ಸೇರಿ ಮೂವರಿಗೆ ಗಾಯ

ಧಾರವಾಡ: ವೇಗವಾಗಿ ಹೊರಟಿದ್ದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಕುಮಾರೇಶ್ವರನಗರದ ಪೆಟ್ರೋಲ್ ಬಂಕ್ ಬಳಿ ನಡೆದಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಬೀದರ ಮೂಲದ ವೈಧ್ಯ ಡಾ.ಅರವಿಂದ ರಘುನಾಥ ಸೋಮಚಾಂಟಿ ಹಾಗೂ ಧಾರವಾಡ ಮುಧೋಳಕರ ಕಂಪೌಂಡ ನಿವಾಸಿ ಮಹ್ಮದಸಾಧೀಕ ಮೆಹಬೂಬಸಾಬ ಪಟೇಲ್ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಂಪೂರ್ಣವಾಗಿ ಜಖಂಗೊಂಡಿದ್ದು, ವ್ಹೀಲ್ ಕೂಡಾ ಬೇರೆಯಾಗಿ ಎಂಜಿನ್ ಸಮೇತ ಹೊರಗೆ ಬಿದ್ದಿದೆ. ಘಟನೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಸಂಚಾರಿ ಠಾಣೆ ಪೊಲೀಸರು, ಆಗಿರುವ ಪ್ರಮಾದದ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಧಾರವಾಡದ ಹೊಯ್ಸಳನಗರದ ಬಳಿ ಕಾರು ಹಾಗೂ ಅಶೋಕ ಲೈಲ್ಯಾಂಡ ವಾಹನದ ನಡುವೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿಯೂ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಬಗ್ಗೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.