ಅಪಘಾತದಲ್ಲಿ ಮೃತಪಟ್ಟವರು ಖ್ಯಾತ ವೈಧ್ಯರ ಪತ್ನಿಯರು, ಮಾಜಿ ಶಾಸಕರ ಸೊಸೆ- ಸತ್ತವರ ಸಂಖ್ಯೆ 13ಕ್ಕೇರಿಕೆ
1 min readಘಟನೆಯ ಬಗ್ಗೆ ಸಂಬಂಧಿಕರ ಹೇಳಿಕೆ
ಧಾರವಾಡ: ತಾಲೂಕಿನ ಇಟಿಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿಯಾಗಿದ್ದು, ಇನ್ನುಳಿದವರ ಸ್ಥಿತಿಯೂ ಚಿಂತಾಜನಕವಾಗಿದೆ.
ಇಟಿಗಟ್ಟಿ ಬಳಿ ನಡೆದ ಟೆಂಪೋ ಹಾಗೂ ಲಾರಿಯ ಭೀಕರ ಅಪಘಾತದಲ್ಲಿ ದಾವಣಗೆರೆಯಲ್ಲಿನ ಖ್ಯಾತ ವೈಧ್ಯರ ಪತ್ನಿಯರಿದ್ದು, ಮಾಜಿ ಶಾಸಕರ ಸೊಸೆಯು ತೀರಿಕೊಂಡಿದ್ದಾರೆ. ವಾಹನದಲ್ಲಿದ್ದವರನ್ನ ಪ್ರೇರಣಾ, ಆಶಾ ಜಗದೀಶ, ಕರಣ ಜ್ಯೋತಿ, ಶಂಕುತಲಾ, ಉಷಾ, ವೇದಾ, ವೀಣಾ ವಿ.ಆರ್, ನಿರ್ಮಲಾ, ಮಂಜುಳಾ, ರಜನಿ, ಪ್ರೀತಿ ರಾಣಿ, ಚಿಟ್ಟಿ ಹಾಗೂ ಮಾನಸಿ ಸೇರಿದಂತೆ ಒಟ್ಟು 17 ಜನರು ಗೋವಾಗೆ ಸಂಕ್ರಮಣ ಆಚರಣೆಗೆ ಹೊರಟಿದ್ದರು.
ಕೆಲವು ವರ್ಷಗಳಿಂದ ವೈಧ್ಯರ ಪತ್ನಿಯರು ಅಸೋಸಿಯೇಷನ್ ಮಾಡಿಕೊಂಡು ಪ್ರತಿವರ್ಷ ಪ್ರವಾಸಕ್ಕೆ ಹೋಗುತ್ತಿದ್ದರು. ಮೊದಲ ಬಾರಿಗೆ ಬೆಳಗಿನ ಜಾವ 3.30ಕ್ಕೆ ದಾವಣಗೆರೆಯಿಂದ ಹೊರಟಿದ್ದಾರೆ. ಆದರೆ, ಇಟಿಗಟ್ಟಿ ಬಳಿ ಟಿಪ್ಪರ್ ಜವರಾಯ ರೂಪದಲ್ಲಿ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಈಗಾಗಲೇ 11 ಜನರು ತೀರಿಕೊಂಡಿದ್ದು, ಇನ್ನುಳಿದ ನಾಲ್ವರ ಸ್ಥಿತಿ ಕೂಡಾ ಗಂಭೀರವಾಗಿದೆ. ಅಪಘಾತ ನಡೆದ ಕೆಲವೇ ನಿಮಿಷಗಳಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರೂ, ಪ್ರಾಣ ಹೋಗುವವರ ಸಂಖ್ಯೆಯನ್ನ ಕಡಿಮೆ ಮಾಡಲು ಆಗಿಲ್ಲ. ಏಕೆಂದರೇ, ಅಪಘಾತ ಅಷ್ಟೊಂದು ಭೀಕರವಾಗಿದೆ.
ಧಾರವಾಡದ ಜಿಲ್ಲಾಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸಗೆ ಶವಗಳನ್ನ ರವಾನೆ ಮಾಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.