Posts Slider

Karnataka Voice

Latest Kannada News

ಆಸ್ಪತ್ರೆಯಲ್ಲಿ ಬೈಕ್ ಈಡ್ತೀರಾ… ಹುಷಾರ್ – ರಾತ್ರಿ ಎರಡೂವರೆಗೆ ಬೈಕ್ ಕದಿತಾರೆ..

1 min read
Spread the love

ಹುಬ್ಬಳ್ಳಿ: ಒಂದೇಡೆ ಇಡೀ ದೇಶವೇ ಕೊರೋನಾದಿಂದ ಕಂಗಾಲಾಗಿ ಹೋಗಿದ್ದಾರೆ. ಹೀಗಾಗಿ ಇದರ ನಡುವೆ ಆಸ್ಪತ್ರೆಗಳಿಗೆ ಹೋಗೋರು ಬರೋರ್ ಸಂಖ್ಯೆ ಹೆಚ್ಚಿಗೆ ಆಗಿದೆ. ಅದರ ಜೊತೆ ಆಸ್ಪತ್ರೆಯ ಸಿಬ್ಬಂದಿ ಕೂಡಾ ತಮ್ಮ ಕಾರ್ಯದ ಒತ್ತಡದಲ್ಲಿ ಮಗ್ನರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಬೈಕ್ ಕಳ್ಳರು ಮಾತ್ರ ಆಸ್ಪತ್ರೆಗೆ ಬರುವ ರೋಗಿಗಳ ವಾಹನಗಳನ್ನು ಟಾರ್ಗೆಟ್ ಮಾಡಿ, ಬೈಕ್ ಗಳನ್ನು ಎಗುರಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

ಬೈಕ್ ಹೇಗೆ ಕಳ್ಳತನ ಮಾಡ್ತಾರೆ ನೋಡಿ

ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿನ ಇಎಸ್ ಐ ಆಸ್ಪತ್ರೆಯಲ್ಲಿ ಬೈಕ್ ಕಳ್ಳರು ತಮ್ಮ ಕೈ ಚಳಕವನ್ನು ತೋರುತ್ತಿದ್ದು, ಕಳೆದ ತಿಂಗಳು ಎರಡು ಬೈಕ್ ಹಾಗೂ ಇಂದು ಒಂದು ಆಕ್ಟೀವ್ ಹೊಂಡಾ ಬೈಕ್ ನ್ನು ಕಳ್ಳರು ಎಗರಿಸಿದ್ದಾರೆ.

ಸಧ್ಯ ಈ ಕಳ್ಳತನಕ್ಕೆ ಸಂಬಂದಿಸಿದ ಹಾಗೆ ಹಳೆ ಹುಬ್ಬಳ್ಳಿಯ ಪೊಲೀಸರು ಬೈಕ್ ಕಳ್ಳರ ಜಾಲಕ್ಕೆ ಬಲೆ ಬಿಸಿದ್ದು ,ಬೈಕ್ ಕಳ್ಳರನ್ನು ಬಂಧಿಸಿ ಸಾರ್ವಜನಿಕರಿಗೆ ಬೈಕ್ ಕಳ್ಳರಿಂದ ಮುಕ್ತಿಯನ್ನು ಕೊಡಬೇಕಿದೆ.


Spread the love

Leave a Reply

Your email address will not be published. Required fields are marked *