Posts Slider

Karnataka Voice

Latest Kannada News

ಡಿಯೋಗೆ ಅಂಬ್ಯುಲೆನ್ಸ್ ಡಿಕ್ಕಿ: ಬಿಇ ವಿದ್ಯಾರ್ಥಿ ಸ್ಥಿತಿ ಏನಾಗಿದೆ ಗೊತ್ತಾ..

1 min read
Spread the love

ಹುಬ್ಬಳ್ಳಿ: ನವನಗರ ಬಳಿ ಅತಿ ವೇಗವಾಗಿ ಬರುತ್ತಿದ್ದ ಅಂಬ್ಯುಲೆನ್ಸ್ ಡಿಯೋಗೆ ಡಿಕ್ಕಿ ಹೊಡೆದ ಪರಿಣಾಮ ಬಿಇ ವಿದ್ಯಾರ್ಥಿಯೋರ್ವನ ಚಿಂತಾಜನಕವಾಗಿದ್ದು, ಡಿಯೋ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.


ನವನಗರದ ಸುನೀಲ ಪಾಟೀಲ ಅನ್ನೋರಿಗೆ ಸೇರಿದ ವಾಹನಕ್ಕೆ ಡಿಕ್ಕಿಯಾಗಿದೆ. ಅಂಬ್ಯುಲೆನ್ಸ್ ಸುಮಾರು ದೂರ ಡಿಯೋವನ್ನ ಎಳೆದುಕೊಂಡು ಹೋಗಿದೆ. ತೀವ್ರ ರಕ್ತಸ್ರಾವವಾದ ಪರಿಣಾಮ ಅದೇ ಅಂಬ್ಯುಲೆನ್ಸ್‌ ಲ್ಲಿ ತೆಗೆದುಕೊಂಡು ಕಿಮ್ಸ್‌ಗೆ ರವಾನೆ ಮಾಡಲಾಗಿದೆ.
ಅಂಬ್ಯುಲೆನ್ಸ್ ಚಾಲಕನೇ ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗಿದ್ದು, ಜಖಂಗೊಂಡಿರುವ ಡಿಯೋವನ್ನ ಉತ್ತರ ಸಂಚಾರಿ ಠಾಣೆಗೆ ಕಳಿಸಲಾಗಿದೆ.


Spread the love

Leave a Reply

Your email address will not be published. Required fields are marked *