ತಾಳಿಕೋಟಿ-ಲಕ್ಷಾಂತರ ಮೌಲ್ಯದ ಹಸಿ ಗಾಂಜಾ ಜಪ್ತಿ: ಇಬ್ಬರೂ ಆರೋಪಿ ಅಂದರ್
ವಿಜಯಪುರ: ಜಿಲ್ಲೆಯ ತಾಳಿಕೋಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಹಸಿ ಗಾಂಜಾ ಜಪ್ತಿ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟಿಯ ಚವನಬಾವಿಯಲ್ಲಿ ಪ್ರತ್ಯೇಕ ಎರಡು ಕಡೆಗೆ ದಾಳಿ ಮಾಡಿ 75 ಕೆಜಿ ಹಸಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಭೀಮಣ್ಣ ತುರಡಗಿ ಜಮೀನಿನಲ್ಲಿ 55 ಕೆಜಿ ಗಾಂಜಾ ಹಾಗೂ ಕೇಶಪ್ಪ ಈಳಿಗೇರ ಜಮೀನಿನಲ್ಲಿ 20 ಕೆಜಿ ಹಸಿ ಗಾಂಜಾ ತಮ್ಮ ಜಮೀನಿನಲ್ಲಿ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಬಸವನಬಾಗೇವಾಡಿ ಡಿವೈಎಸ್ಪಿ ಈ. ಶಾಂತವೀರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಹಲವು ಪ್ರಕರಣಗಳು ಪತ್ತೆಯಾಗುತ್ತಿದ್ದು, ಹಲವರು ತಮ್ಮ ತಮ್ಮ ಹೊದಲ್ಲಿಯೇ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಪೊಲೀಸರು ರೈತರ ಹೊಲಗಳನ್ನ ತಡಕಾಡುವ ಸ್ಥಿತಿ ಬಂದೊದಗಿದೆ.
ಈ ಕುರಿತು ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.