ಹುಬ್ಬಳ್ಳಿಯಲ್ಲಿ ‘ಚೆಂಬರ’ ಪ್ಲೇಟ ಕಳ್ಳರ ಬಂಧನ
ಹುಬ್ಬಳ್ಳಿ: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ರಸ್ತೆಯ ಪಕ್ಕದಲ್ಲಿ ಹಾಕಿದ್ದ ಚೆಂಬರ್ ಪ್ಲೇಟಗಳನ್ನ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜ್ಯೂನಲ್ ನಂಃ 05 ರ ಸಹಾಯಕ ಅಭಿಯಂತರರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಬೈರಿದೇವರಕೊಪ್ಪದ ಬಸವರಾಜ ಕಂದಗಲ್, ಉಣಕಲ್ ಗ್ರಾಮದ ಲೋಹಿತ ಯಲ್ಲಪ್ಪ ಬಾಳಪ್ಪನವರ, ಸವದತ್ತಿ ಓಣಿಯ ಮಹೇಶ ಬಸಪ್ಪ ಪದ್ದಣ್ಣನವರ ಹಾಗೂ ಯಲ್ಲಾಪುರ ಓಣಿಯ ಮೊಹ್ಮದಗೌಸ ಬಂಡೆ ಎಂಬ ನಾಲ್ವರನ್ನ ಬಂಧನ ಮಾಡಿದ್ದಾರೆ.
ಆರೋಪಿಗಳಿಂದ ಕದ್ದ ಚೆಂಬರ್ ಪ್ಲೇಟುಗಳು, ಅವುಗಳನ್ನ ತೆಗೆಯಲು ಬಳಸಿದ ಕಬ್ಬಿಣದ ರಾಡು ಹಾಗೂ ಆಟೋರಿಕ್ಷಾವನ್ನ ವಶಕ್ಕೆ ಪಡೆಯಲಾಗಿದೆ.
ವಿದ್ಯಾನಗರ ಪೊಲೀಸ ಠಾಣೆಯ ಪಿ.ಐ ಆನಂದ ಒನಕುದ್ರೆ, ಪಿ.ಎಸ್.ಐ ಶಿವಾನಂದ ಬನ್ನಿಕೊಪ್ಪ. ಎ.ಎಸ್.ಐ ಕೆ.ಎಚ್.ನೆಲ್ಲೂರ ಹಾಗೂ ಸಿಬ್ಬಂದಿಗಳಾದ ಸುನೀಲ ಲಮಾಣಿ, ರಮೇಶ ಹಲ್ಲೆ, ಬಿ.ಎಸ್.ಹಚ್ಚಡದ , ಬಿ.ಕೆ ಕೊಟಬಾಗಿ, ಎಸ್.ಜಿ ಹೊಸಮನಿ, ಎಸ್.ಎಚ್ ತಹಶೀಲ್ದಾರ, ಬಿ.ಎಂ. ಗೂಡಗೂರ, ಬಿ.ಐ.ಕಿತ್ತೂರ, ವಾಯ್.ಎಮ್,ಶೇಂಡ್ಗೆ, ಎಸ್.,ಬಿ,ಯಳವತ್ತಿ, ರುದ್ರಪ್ಪ ಹೊರಟ್ಟಿ, ಕುಮಾರಿ ಪುಷ್ಪಾ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.