Posts Slider

Karnataka Voice

Latest Kannada News

‘ಪ್ರತಿಭಾವಂತೆ ಸಂಜನಾ’ ತಾಯಿ ಸಮ್ಮುಖದಲ್ಲೇ ‘ಮಹೀರಾ’ ಆಗಿದ್ದು..! ಅರೇಬಿಕ್ ಹೆಸರಲ್ಲೇನಿದೆ ಅರ್ಥ..!

1 min read
Spread the love

ಬೆಂಗಳೂರು: ಚಿತ್ರನಟಿ ಕಂ ಮಾಡೆಲ್ ಆಗಿದ್ದ ಸಂಜನಾ ಮನೋಹರ ಗರ್ಲಾನಿ 2018ರ ಅಕ್ಟೋಬರಲ್ಲೇ 9ರಂದೇ ಮಹೀರಾ ಆಗಿದ್ದರೂ, ಹೊರಜಗತ್ತಿಗೆ ಸಂಜನಾ ಆಗಿಯೇ ಮುಂದುವರೆದಿದ್ದು, ಸಿನೇಮಾದವರ ರಂಗಿನಾಟದಲ್ಲಿ ಎಲ್ಲವೂ ಹೀಗೇನಾ ಎಂದು ಸಂಶಯ ಬರುವಂತೆ ಮಾಡಿದೆ.

ಈ ಬಗ್ಗೆ ಅಧಿಕೃತ ದಾಖಲೆಯೊಂದು ಹೊರಗೆ ಬಂದಿದ್ದು, ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲೂಮ್ ಶಾಹ್ ವಲಿಉಲ್ಲಾ ಮಸೀದಿಯಲ್ಲಿ ಸಂಜನಾ ಮಹೀರಾ ಆಗಿ ಮತಾಂತರಗೊಂಡಿದ್ದಾರೆ.

ಈ ಬಗ್ಗೆ ಮದರಸಾದ ಧರ್ಮ ಗುರು ಮೊಹ್ಮದ ಜಲಾಲುದ್ಧೀನ ಮಾತನಾಡಿ, ಸಂಜನಾ ಜೊತೆಗೆ ಅಕ್ಟೋಬರಲ್ಲಿ ಮೂವರು ಜನರು ಬಂದಿದ್ದರು. ಸಂಜನಾ ತಾಯಿ ಅರ್ಚನಾ ಗರ್ಲಾನಿ, ಬೆಂಗಳೂರಿನ ನಿವಾಸಿಗಳಾದ ಇಮ್ತಿಯಾಜ್ ಅಹ್ಮದ ಮತ್ತು ಅಸ್ಲಂ ಪಾಷಾ ಬಂದಿದ್ದರು. ಇದೇ ಸಮಯದಲ್ಲಿ ಕೋರ್ಟ್ ಅಫಿಡೆವಿಟ್ ಕೂಡಾ ತಂದಿದ್ದರು. ಯಾವುದೇ ಒತ್ತಡವಿಲ್ಲದೇ ಇಸ್ಲಾಂಗೆ ಮತಾಂತರವಾಗುತ್ತೇನೆ ಎಂದರು. ಹೀಗಾಗಿಯೇ ಧರ್ಮ ಸ್ವೀಕಾರದ ಕಾರ್ಯವನ್ನ ಮಾಡಿ ಮುಗಿಸಿದೆ ಎಂದಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಂಜನಾ ಅಲಿಯಾಸ್ ಮಹೀರಾ ಮತಾಂತರಗೊಂಡಿರುದನ್ನ ಮುಚ್ಚಿಟ್ಟಿದ್ದು ಕೂಡಾ ಬಯಲಾಗಿರುವುದು, ಹೊಸ ವಿವಾದಕ್ಕೆ ಕಾರಣವಾಗಿದೆ.

ಅಂದಹಾಗೇ ಮಹೀರಾ ಅಂದ್ರೇ, ಟ್ಯಾಲೆಂಟೇಡ್, ಜಾಣಾಕ್ಷೆ, ಪ್ರತಿಭಾವಂತೆ ಎಂದರ್ಥ. ಇದು ಅರೆಬಿಕ್ ಭಾಷೆಯಲ್ಲಿ ಬರುವ ಹೆಸರು.


Spread the love

Leave a Reply

Your email address will not be published. Required fields are marked *