Karnataka Voice

Latest Kannada News

ನವೆಂಬರ್ 1ರಿಂದ ಕಾಲೇಜು ಆರಂಭ- ಮುನ್ಸೂಚನೆ ನೀಡಿದ ಸಚಿವರು

Spread the love

ಮೈಸೂರು: ನವೆಂಬರ್‌ನಲ್ಲಿ ಕಾಲೇಜು ಪ್ರಾರಂಭಿಸಲು ಯುಜಿಸಿ ಗೈಡ್‌ಲೈನ್ಸ್‌ನಲ್ಲಿ ಅವಕಾಶ ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಭೆಗಳು, ಪೂರ್ವ ಸಿದ್ದತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಕಾಲೇಜು ಆರಂಭದ ದಿನಾಂಕ ಘೊಷಣೆ ಮಾಡುವುದಾಗಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ಮಾತನಾಡಿರುವ ಡಿಸಿಎಂ ಅಶ್ವತ್ಥ ನಾರಾಯಣ, ಈಗಾಗಲೇ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಆಫ್‌ಲೈನ್ ಕ್ಲಾಸ್‌ಗೂ ವಿದ್ಯಾರ್ಥಿಗಳ ಅಪೇಕ್ಷೆ ಇದೆ. ಆ ನಿಟ್ಟಿನಲ್ಲಿ ಆಫ್‌ಲೈನ್ ಕ್ಲಾಸ್‌ಗೆ ಕ್ರಮ. ಕಾಲೇಜುಗಳ ಆರಂಭದ ಸಿದ್ದತೆಗಳ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಹೇಳಿದರು.

ಶಿರಾ, ಆರ್‌ಆರ್‌ ನಗರ ಉಪ ಚುನಾವಣೆ ಹಿನ್ನೆಲೆ: ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ. ಸ್ಥಿರವಾದ ಸರ್ಕಾರ ಬೇಕು ಅಂತ ಜನರ ಅಪೇಕ್ಷೆ ಇದೆ. ಕಳೆದ ಮೈತ್ರಿ ಸರ್ಕಾರದ ಕಚ್ಚಾಟದಿಂದ ಜನ ಬೇಸತ್ತಿದ್ದರು. ಈಗ ಕಾಂಗ್ರೆಸ್ ಜೆಡಿಎಸ್ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ‌. ಶಿರಾದಲ್ಲಿ ಬೇರೆ ಪಕ್ಷಕ್ಕೆ ಮತ ನೀಡುವುದರಿಂದ ಏನು ಉಪಯೋಗವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರ ಆಡಿಯೋ ರಿಲೀಸ್ ಆಗಿದೆ. ಜೆಡಿಎಸ್ ಭಾವನಾತ್ಮವಾಗಿ ಮತ ಸೆಳೆಯಲು ಸಾಧ್ಯವಿಲ್ಲ. ಜವಾಬ್ದಾರಿ ಸ್ಥಾನ ನಿರ್ವಹಿಸದ ಕಾಂಗ್ರೆಸ್ ಜೆಡಿಎಸ್‌ಗೆ ಯಾವ ಪ್ರತಿಷ್ಠೆಯೂ ಇಲ್ಲ. ತಮ್ಮ ಕಾರ್ಯದ ಮೂಲಕ ಜನರ ವಿಶ್ವಾಸ ಗಳಿಸಬೇಕೆ ಹೊರತು ಪ್ರತಿಷ್ಠೆ ಇಂದಲ್ಲ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಹೇಳಿದರು.

ನೆರೆ ಸಂತ್ರಸ್ಥರಿಗೆ ಕೇಂದ್ರ ಸರ್ಕಾರ ಸ್ಪಂದಿಸದ ಆರೋಪ: ಎನ್‌ಡಿ‌ಆರ್‌ಎಫ್ ಗೈಡ್‌ಲೈನ್ಸ್ ಪ್ರಕಾರ ಹಣ ಬಿಡುಗಡೆ ಆಗುತ್ತೆ. ಎಲ್ಲಾ ರಾಜ್ಯಗಳು ಒಪ್ಪಿ ಮಾಡಿರುವ ಗೈಡ್‌ಲೈನ್ಸ್. ಈಗಾಗಲೇ ತುರ್ತು ಪರಿಹಾರ ನೀಡಲಾಗುತ್ತಿದೆ. ಹತ್ತು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಪರಿಹಾರದ ಮೊತ್ತವನ್ನ, ನಮ್ಮ‌ಕೇಂದ್ರ ಸರ್ಕಾರ ಒಂದೇ ಅವಧಿಯಲ್ಲಿ ರಿಲೀಸ್ ಮಾಡಿದೆ ಎಂದರು.

ಸಿಎಂ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ ಹಿನ್ನೆಲೆ: ರಾಜೀನಾಮೆ ಕೇಳುವ ನೈತಿಕತೆ ಸಿದ್ದರಾಮಯ್ಯಗಿಲ್ಲ. ಅವರ ಅವಧಿಯಲ್ಲಿ ನೆರೆ ಸಂತ್ರಸ್ಥರಿಗೆ ಯಾವ ರೀತಿ ಸ್ಪಂದಿಸಿದ್ದಾರೆ ಎಂಬುದು ಗೊತ್ತು. ಅಂದು ಯಾವ ಪ್ರವಾಸ ಮಾಡಲಿಲ್ಲ. ಇವತ್ತು ಹೇಳಿಕೆ ಕೊಡಬೇಕು ಅಂತ ಕೊಟ್ಟಿದ್ದಾರೆ ಅಷ್ಟೇ ಎಂದು ಸಿದ್ದರಾಮಯ್ಯಗೆ ಡಾ.ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು.


Spread the love

Leave a Reply

Your email address will not be published. Required fields are marked *