ಆನ್ ಲೈನ್ ಯೋಗ ಸ್ಪರ್ಧೆ- ಚೈತ್ರಾ, ರಾಧಾ ರಾಜ್ಯಮಟ್ಟಕ್ಕೆ ಆಯ್ಕೆ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಅಮೆಚೂರ್ ಸ್ಪೋರ್ಟ್ಸ ಅಸೋಸಿಯೇಷನ್ ಹಾಗೂ ಧಾರವಾಡದ ಯೋಗ ಮತ್ತು ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ಆನ್ ಲೈನ್ ಯೋಗಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಜಿಲ್ಲೆಯ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಚೈತ್ರಾ ಬಸವರಾಜ ಡೊಳ್ಳಿನ, ಶಿರಗುಪ್ಪಿಯ ರಾಧಾ ಎಂ.ಅಳವಂಡಿ ಹಾಗೂ ಪ್ರಿಯಾ ಜಿ.ಹಿರೇಮಠ ಅವರು 12-14 ವರ್ಷ ವಯೋಮಾನದ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆನ್ ಲೈನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ 117 ಯೋಗಪಟುಗಳು ಭಾಗವಹಿಸಿದ್ದರು. ಹತ್ತು ಆಸನಗಳ ಅತ್ಯುತ್ತಮ ಪ್ರದರ್ಶನ ನೀಡಿದ ಮೂವರು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಬರುವ ಡಿಸೆಂಬರ್ ನಲ್ಲಿ ರಾಜ್ಯ ಮಟ್ಟದ ನಂತರ ರಾಷ್ಟ್ರಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದು ಧಾರವಾಡ ಜಿಲ್ಲಾ ಯೋಗ ಮತ್ತು ಕ್ರೀಡಾ ಸಂಸ್ಥೆ ಅಧ್ಯಕ್ಷ ಸಂಜೀವಕುಮಾರ್ ಹಡಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.