Posts Slider

Karnataka Voice

Latest Kannada News

ಲಂಡನ್ ಹುಡುಗಿ ಕನಸು ಕಂಡಿದ್ದ ಪ್ರಲ್ಹಾದ ಕುಲಕರ್ಣಿಗೆ 5ಲಕ್ಷ ಟೋಪಿ

Spread the love

ಹುಬ್ಬಳ್ಳಿ: ನವನಗರದ ಇಲೆಕ್ಟ್ರಾನಿಕ ಗುತ್ತಿಗೆದಾರನೋರ್ವನಿಗೆ ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಮೂಲಕ ಬೆಳಕಿಗೆ ಬಂದಿದೆ.

ನವನಗರದ ನಿವಾಸಿಯಾಗಿರುವ ಪ್ರಮೋದ ಪ್ರಲ್ಹಾದರಾವ ಕುಲಕರ್ಣಿ ಎಂಬುವವರೇ ಬರೋಬ್ಬರಿ 5ಲಕ್ಷ 15549 ರೂಪಾಯಿಗಳನ್ನ ಅನ್ನಾ ಮೊಹ್ಮದ ಎಂಬ ಯುವತಿಗಾಗಿ ಕಳೆದುಕೊಂಡಿದ್ದಾರೆ.

ಆಗಿದ್ದೇನು ಗೊತ್ತಾ..

ವಧು ಹುಡುಕುವ ಸಂಬಂಧ ಪ್ರಮೋದ ಕುಲಕರ್ಣಿ ಸಂಗಮ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಇದೇ ಮ್ಯಾಟ್ರಿಮೋನಿ ಮೂಲಕ ಲಂಡನ್ ಮೂಲದ ಅನ್ನಾ ಮೊಹ್ಮದ ಎಂಬ ಯುವತಿಯ ಪರಿಚಯವಾಗಿದೆ. ನಿರಂತರವಾಗಿ ವಾಟ್ಸ್ ಅಫ್ ಕಾಲ್ ಮತ್ತು ಚಾಟಿಂಗ್ ಮಾಡುವ ಮೂಲಕ ಮದುವೆಯಾಗುವುದಾಗಿ ನಂಬಿಸಿದ್ದಳು.

ಆನ್ ಲೈನ್ ದಲ್ಲೇ ಲವ್ ಹೆಚ್ಚಾಗುತ್ತಲೇ ದುಬಾರಿ ಬೆಲೆಯ ಉಡುಗೊರೆ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಳು. ಇದಾದ ಕೆಲವೇ ದಿನಗಳಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ ನಿಮಗೆ ಲಂಡನದಿಂದ ಪಾರ್ಸಲ ಬಂದಿದೆ ಎಂದು ಸುಳ್ಳು, ಅದನ್ನ ಪಡೆಯಲು ನೀವು ಶುಲ್ಕ ಭರಿಸುವಂತೆ ಸುಳ್ಳು ಹೇಳಿ ಹಂತ ಹಂತವಾಗಿ 5.115,549 ರೂಪಾಯಿಗಳನ್ನ ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ.

ಎಲ್ಲ ಹಣ ಹೋದ ಮೇಲೆ ಅನ್ನಾ ಮೊಹ್ಮದ ಸಂಪರ್ಕ ಕಟ್ ಆಗಿದ್ದರಿಂದ ಮೋಸ ಹೋದೆನೆಂದು ಪ್ರಲ್ಹಾದ ಕುಲಕರ್ಣಿಗೆ ಗೊತ್ತಾಗಿ ಸೈಬರ್ ಕ್ರೈಂನಲ್ಲಿ ದೂರು ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *