ಹುಬ್ಬಳ್ಳಿ-ಧಾರವಾಡ: ಎರಡು ಬೈಕ್- ಸತಿಯ ಗಂಡ- 90 ಸಾವಿರ: ಮಂಗಮಾಯ
1 min readಹುಬ್ಬಳ್ಳಿ-ಧಾರವಾಡ: ತನ್ನ ಮಡದಿ ಮಕ್ಕಳೊಂದಿಗೆ ಕಿಮ್ಸ್ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಯೋರ್ವರು, ಮಕ್ಕಳ ಆಸ್ಪತ್ರೆಯ ಜನರೇಟರ್ ರೂಮ್ ಹತ್ತಿರ ಬೈಕ್ ನಿಲ್ಲಿಸಿ ಹೋಗಿ ಮರಳಿ ಬಂದಾಗ ಬೈಕ್ ಎಗರಿಸಿದ್ದು ಗೊತ್ತಾಗಿದೆ. ಕೆಎ-25 ಇವಿ-9205 ಟಿವಿಎಸ್ ಎಕ್ಸಲ್ ಕಳ್ಳತನವಾಗಿದ್ದು ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದ್ಯಾಗಿರಿ ಪೊಲೀಸ್ ಠಾಣೆ
ಧಾರವಾಡ ಲಕ್ಕಮನಹಳ್ಳಿ 2ನೇ ಕ್ರಾಸನ ಅರವಿಂದನಗರದ ತಮ್ಮ ಮನೆಯ ಮುಂದೆ ಇರುವ ಕಂಪೌಂಡದಲ್ಲಿ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಬೈಕ್ ಕೆಎ-31 ಆರ್-0921 ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣವನ್ನ ವಿದ್ಯಾಗಿರಿ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದು, ಬೈಕಿನ ಹುಡುಕಾಟ ನಡೆಸಿದ್ದಾರೆ.
ವಿದ್ಯಾಗಿರಿ ಪೊಲೀಸ್ ಠಾಣೆ
ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋದ ತನ್ನ ಪತಿ ಮರಳಿ ಮನೆಗೆ ಬಂದಿಲ್ಲವೆಂದು ಮಹಿಳೆಯೋರ್ವಳು ವಿದ್ಯಾಗಿರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
32 ವಯಸ್ಸಿನ ಕಿರಣ ಗಾಮನಗಟ್ಟಿ ಎಂಬ ವ್ಯಕ್ತಿಯೇ ಕಾಣೆಯಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ದೂರುದಾರಳ ಪತಿಯ ಹುಡುಕಾಟವನ್ನ ಪೊಲೀಸರು ನಡೆಸಿದ್ದಾರೆ.
ಸೈಬರ್ ಕ್ರೈಂ ಪೊಲೀಸ್ ಠಾಣೆ
ಓಎಲ್ ಎಕ್ಸನಲ್ಲಿ ಸೋಫಾವನ್ನ ಖರೀದಿ ಮಾಡುವುದಾಗಿ ಹೇಳಿ ಆಸ್ನಾ ಧೀರಜ್ ಮಧನ ಎಂಬುವವರಿಗೆ 90002 ವಂಚನೆ ಮಾಡಿರುವ ಪ್ರಕರಣ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ.
ಓ.ಎಲ್.ಎಕ್ಸ್ ನಲ್ಲಿ ಮಾರಾಟಕ್ಕೆ ಹಾಕಿದ ಸೋಪಾವನ್ನು ಖರೀದಿ ಮಾಡುವುದಾಗಿ ಅಪರಿಚಿತ ವ್ಯಕ್ತಿ ಕರೆಮಾಡಿ ಹೇಳಿ ನಂಬಿಸಿದ್ದು ಹಣ ಜಮಾ
ಮಾಡುತ್ತೇವೆಂದು ದೂರುದಾರರಿಗೆ ಅಪರಿಚಿತ ವ್ಯಕ್ತಿ ಮತ್ತು ಒಬ್ಬ ಅಪರಿಚಿತ ಮಹಿಳೆ ಮಾತನಾಡಿ, ದೂರುದಾರರ ವಾಟ್ಸಪ್ ನಂಬರಿಗೆ ಕ್ಯೂಆರ್ ಕೋಡ್ ಗಳನ್ನು ಕಳುಹಿಸಿ ಅವುಗಳನ್ನು ಸ್ಕ್ಯಾನ್ ಮಾಡಿ ಯು.ಪಿ.ಐ ಪಿನ್ ಹಾಕಿ ಸಬ್ ಮಿಟ್ ಮಾಡಲು ಹೇಳಿದ್ದು ಅದರಂತೆ ಮಾಡಿದಾಗ ದೂರುದಾರರ ಖಾತೆಗೆ ಹಣ ಜಮಾ ಆಗದೆ ದೂರುದಾರರ ಎಸ್.ಬಿ.ಐ ಖಾತೆಯಿಂದ ಹಂತ ಹಂತವಾಗಿ ಒಟ್ಟು 90002 ರೂಪಾಯಿಗಳನ್ನ ಆನ್ ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.