ದೇಸಾಯಿ ಕ್ರಾಸ್ ಸೇತುವೆಯಲ್ಲೂ ನ್ಯೂನ್ಯತೆ: ಮೇಲಿಂದ ಬಿದ್ದಿದ್ದೆ ಸುರಂಗ..!
ಈ ರಸ್ತೆಯ ಮೂಲಕ ಸಂಚರಿಸುವ ಜನರು ಈ ಗುಂಡಿಯಿಂದ ತೊಂದರೆ ಅನುಭವಿಸಬಾರದೆಂದು ಸಂಚಾರಿ ಪೊಲೀಸರು ಕೆಲವು ದಿನ ಇಲ್ಲಿ ಬ್ಯಾರಿಕೇಡ್ ಇಡುವ ಪ್ರಯತ್ನ ಮಾಡಿದ್ದರು. ಆದರೆ, ಕೆಲವರು ಅದಕ್ಕೆ ಬಂದು ಡಿಕ್ಕಿ ಹೊಡೆಯತೊಡಗಿದ್ದ್ರು.
ಹುಬ್ಬಳ್ಳಿ: ಅವಳಿನಗರವನ್ನ ಸ್ಮಾರ್ಟ್ ಸಿಟಿ ಮಾಡಲು ಹೊರಟವರಿಗೆ ಕಹಿ ಘಟನೆಗಳು ಎದುರಾಗುತ್ತಿದ್ದು, ಕೆಲವೇ ದಿನಗಳ ಹಿಂದೆ ನವಲೂರು ಸೇತುವೆ ಪದೇ ಪದೇ ಕುಸಿಯುತ್ತಿರುವ ನಡುವೆ ಮತ್ತೊಂದು ಪ್ರಮುಖ ಸೇತುವೆಯ ಮೇಲ್ಬಾಗದಿಂದಲೇ ಸುರಂಗ ಬೀಳುತ್ತಿದ್ದು, ಸಂಚಾರಿಗಳಿಗೆ ಆತಂಕ ಸೃಷ್ಟಿ ಮಾಡುತ್ತಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರರ ನಿವಾಸಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಕೆಲವೇ ತಿಂಗಳುಗಳ ಹಿಂದೆ ಸೇತುವೆ ನಿರ್ಮಾಣವಾಗಿದ್ದು, ರಸ್ತೆ ಮಧ್ಯದಲ್ಲೇ ಕೆಳಗಿನವರೆಗೆ ಸುರಂಗ ಬಿದ್ದಿದೆ. ಇದು ಸಂಚಾರಿಗಳಲ್ಲಿ ಆತಂಕ ಮೂಡಿಸಿದೆ.
ದೇಸಾಯಿ ಕ್ರಾಸ್ ಬಳಿಯಿರುವ ಸೇತುವೆಯು ಮೇಲಿಂದಲೇ ಕುಸಿದು ಈಗಾಗಲೇ ಅಲ್ಲೊಂದು ಗುಂಡಿ ಸೃಷ್ಟಿಯಾಗಿದೆ. ಅದೇ ಗುಂಡಿಯು ಕೆಳಗಿನವರೆಗೂ ಬಿದ್ದಿದ್ದು, ಮಳೆ ಬಂದರೇ ಕೆಳಗಿನವರೆಗೂ ನೀರು ಬೀಳುತ್ತಿದೆ. ಅಷ್ಟೊಂದು ಕಳಫೆಯಾಗಿ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ.
ನಗರದ ಅಭಿವೃದ್ಧಿಯನ್ನ ಬಯಸುವ ನೆಪದಲ್ಲಿ ಕಂಡ ಕಂಡ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟಿರುವ ಪರಿಣಾಮವೇ ಇಂತಹ ಸ್ಥಿತಿಗೆ ಕಾರಣವಾಗುತ್ತಿದೆ ಎನ್ನುವುದು ಪ್ರಜ್ಞಾಂವತರ ಮಾತು. ಒಳ್ಳೆಯ ಮಾತುಗಳು ಸಂಬಂಧಿಸಿದವರಿಗೆ ತಲುಪಿ, ಇಂತಹ ವ್ಯವಸ್ಥೆಗೆ ಕಾರಣವಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸೂಕ್ತವಲ್ಲವೇ..
                      
                      
                      
                      
                      