ಸರಕಾರಿ ಶಾಲೆ ಮೈದಾನದಲ್ಲಿ ಶವವಾದವರಿಗೆ ಐದು ಲಕ್ಷ ಪರಿಹಾರ: ಇದಕ್ಕೆ ಕಾರಣವಾದವರಿಗೇನು ಮಾಡತ್ತೆ ಸರಕಾರ..!
1 min readಹಾವೇರಿ: ಯಾವ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಆಟವಾಡಬೇಕಾಗಿತ್ತೋ ಅದೇ ಮೈದಾನದಲ್ಲಿ ಬದುಕು ಕಳೆದುಕೊಂಡ ಮೂರು ಜೀವಗಳಿಗೆ ಐದು ಲಕ್ಷದ ಪರಿಹಾರ ನೀಡಲು ಸರಕಾರ ಮುಂದಾಗಿದೆ. ಆದರೆ, ಇಂತಹ ಆವಾಂತರಕ್ಕೆ ಕಾರಣವಾದವರ ಮೇಲೆ ಅದೇನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನ ಸರಕಾರ ಬಹಿರಂಗ ಮಾಡಬೇಕಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮೈದಾನದಲ್ಲಿ ನಡೆದ ಘಟನೆಯಲ್ಲಿ ಬ್ಯಾಡಗಿಯ ಮಹ್ಮದಜಾಫರ ಸವಣೂರ, ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ ಸೈಯದಅಜ್ಮಲ ಹಾವಣಗಿ ಹಾಗೂ ಸಯ್ಯದಅಕ್ಮಲ ಹಾವಣಗಿ ಸಾವಿಗೀಡಾಗಿದ್ದಾರೆ.
ಕಾಲಂ ಹಾಕಲು ತೆಗೆದಿದ್ದ ಗುಂಡಿಯಲ್ಲಿ ಸುಮಾರು 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆಕ್ರೋಶವ್ಯಕ್ತಪಡಿಸಿದ್ದು, ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೃತಪಟ್ಟ ಮಕ್ಕಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಆದರೆ, ಇಂತಹ ಅವಘಡ ಮಾಡಿದವರ ವಿರುದ್ಧ ತನಿಖೆ ಮಾಡುವ ಮೊದಲು ಇಂತಹ ಗುಂಡಿಯನ್ನ ತೆಗೆದ ಗುತ್ತಿಗೆದಾರನನ್ನ ಇನ್ನೂ ಬಂಧನವಾಗಿಲ್ಲ.