ಶಾಲಾ ಶಿಕ್ಷಕರೇ ನೀವೂ 14 ವರ್ಷದಿಂದ ಇಂತಹದ್ದನ್ನ ಕೇಳಿಯೇ ಇರಲಿಲ್ಲ..! ಅದೇನು ಅಂತೀರಾ..
ಬೆಂಗಳೂರು: ಶಿಕ್ಷಣ ಇಲಾಖೆಯೇ ದಂಗು ಬಡಿಯುವಂತ ಮಾಹಿತಿಯೊಂದು ಹೊರ ಬಂದಿದೆ. ಸರಕಾರಿ ಶಾಲೆಗಳಿಗೆ ಮಾನ್ಯತೆ ಸಿಗುತ್ತಿಲ್ಲವೆಂದು ನೋವುಂಡವರಿಗೆ ಇದು ಹಾಲು ಕುಡಿದಷ್ಟು ಸಿಹಿಯಾದ ಪ್ರಸಂಗ. ಕಳೆದ 14 ವರ್ಷದ ವನವಾಸದಿಂದ ಸರಕಾರಿ ಶಾಲೆಗಳಿಗೆ ಹೊಸ ಚೈತನ್ಯ ಸಿಕ್ಕಿದೆ. ಇನ್ನೇನಿದ್ದರೂ ಪಾತ್ರ ಕಾಣಬೇಕಿದೆ.
ಹೌದು.. ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಗಳ ಪ್ರವೇಶ ಹೆಚ್ಚಾಗಿದೆ. ಬರೋಬ್ಬರಿ 90 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಪ್ರವೇಶ ಪಡೆದಿದ್ದು, 14 ವರ್ಷದ ನಂತರ ಇಂತಹದೊಂದು ಸ್ಥಿತಿಗೆ ಶಾಲೆಗಳು ಸಾಕ್ಷಿಯಾಗಲಿವೆ.
ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಸಾವಿರಾರೂ ಕುಟುಂಬಗಳು ಗ್ರಾಮೀಣ ಪ್ರದೇಶದತ್ತ ತೆರಳಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಶಹರದಲ್ಲಿ ತಾವಿರುವ ಪ್ರದೇಶದ ಸುತ್ತಮುತ್ತಲಿನ ಖಾಸಗಿ ಶಾಲೆಗಳನ್ನೇ ನಂಬಿಕೊಂಡಿದ್ದವರೀಗ, ಗ್ರಾಮಕ್ಕೆ ಹೋದ ತಕ್ಷಣವೇ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನ ಸೇರಿಸುತ್ತಿದ್ದಾರೆ.
ಪ್ರತಿ ವರ್ಷವೂ ಮಕ್ಕಳ ಪ್ರವೇಶಕ್ಕಾಗಿ ಶಿಕ್ಷಕರು ಹೆಣಗಾಡುತ್ತಿದ್ದರು. ಪಾಲಕರು ಕೂಡಾ, ಸರಕಾರಿ ಶಾಲೆಗಳಿಗೆ ಪ್ರವೇಶ ಮಾಡಿಸಲು ಹಿಂದೇಟು ಹಾಕುತ್ತಿದ್ದರು. ಆದರೆ, ಕೊರೋನಾದ ಭಯದಿಂದ ಪಾಲಕರು ಕೂಡಾ ಸರಕಾರಿ ಶಾಲೆಗಳಿಗೆ ಮಕ್ಕಳನ್ನ ಕಳಿಸುತ್ತಿರುವುದು ಒಳ್ಳೆಯ ವಿಚಾರವಾಗಿದೆ.
ಶಿಕ್ಷಕರಿಗೆ ಇದು ಶುಭ ಸುದ್ದಿಯಾಗಿದ್ದು, ಖಾಸಗಿ ಶಾಲೆಗಳಿಗೆ ಟಕ್ಕರ್ ಕೊಡುವಂತ ಶಿಕ್ಷಣವನ್ನ ನೀಡುವಲ್ಲಿ ಸಫಲರಾದರೇ, ಮುಂದಿನ ವರ್ಷಗಳಲ್ಲಿಯೂ ಸರಕಾರಿ ಶಾಲೆಗಳಿಗೆ ಪ್ರವೇಶ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.