ಪುರಸಭೆಯಲ್ಲಿ ಗೆದ್ದ ಬಿಜೆಪಿ-ಕಾಂಗ್ರೆಸ್ ಸದಸ್ಯರೆಲ್ಲರೂ ಹೆಂಗಸರೇ: ಮಾಜಿ ಶಾಸಕ ಕೋನರೆಡ್ಡಿ
1 min readಹುಬ್ಬಳ್ಳಿ: ಕಾಂಗ್ರೆಸನ್ಯಾಗ ಬಿಜೆಪ್ಯಾಗ ಬರೇ ಹೆಂಗಸ್ರ ಆರ್ಸಿ ಬಂದಾರ್. ಜೆಡಿಎಸ್ ನ್ಯಾಗ್ ಭಾಳ ಛುಲೋ ಹುಡುಗ್ರ ಆರಿಸಿ ಬಂದಾರ.. ಹೀಗೆ ಹೇಳಿದ್ದು ಬೇರಾರೂ ಅಲ್ಲ. ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ.
ಏನು ಮಾತಾಡಿದ್ರು ಇಲ್ಲಿದೆ ನೋಡಿ..
ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಹೊಂದಾಣಿಕೆ ಮಾಡುವ ಪ್ರಯತ್ನ ಮಾಡಿ, ವಿಫಲವಾದ ಮೇಲೆ ಇಂದು ಮಾಧ್ಯಮದವರೊಂದಿಗೆ ಕೋನರೆಡ್ಡಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಮತ್ತು ಬಿಜೆಪಿ ಹಲವು ಪುರುಷರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ, ಕೋನರೆಡ್ಡಿಯವರು ಮಾತಿನ ಭರಾಟೆಯಲ್ಲಿ ಅವರೆಲ್ಲರನ್ನೂ ಹೆಂಗಸ್ರು ಎಂದು ಅಸಹ್ಯ ಮಾಡಿದ್ದು ಸೋಜಿಗ ಮೂಡಿಸುತ್ತಿದೆ.