AEE ಎಸ್.ಎನ್.ಗೌಡರ ಸಿಬಿಐ ಮುಂದೆ ಹಾಜರು

ಹುಬ್ಬಳ್ಳಿ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿಯವರ ವಿಚಾರಣೆ ನಡೆಸುತ್ತಿರುವ ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ಶಸಸ್ತ್ರ ಮೀಸಲು ಪಡೆಯ ಕಚೇರಿಯಲ್ಲಿಯೇ ಎಇಇಯೊಬ್ಬರು ಸಿಬಿಐ ಮುಂದೆ ಹಾಜರಾಗಿದ್ದಾರೆ.
ಸಧ್ಯ ಪಂಚಾಯತ್ ರಾಜ್ ಇಲಾಖೆಯ ಧಾರವಾಡ ಸಬ್ ಡಿವಿಜನ್ ದಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಎನ್.ಗೌಡರರೇ ಇದೀಗ ಸಿಬಿಐ ಮುಂದೆ ಹಾಜರಾಗಿದ್ದಾರೆ. ಯೋಗೇಶಗೌಡ ಗೌಡರ, ಜಿಲ್ಲಾ ಪಂಚಾಯತಿ ಚುನಾವಣೆಗೆ ನಿಂತಾಗ, ಇದೇ ಗೌಡರ ಚುನಾವಣಾ ನೋಡಲ್ ಅಧಿಕಾರಿಯಾಗಿದ್ದರಂತೆ.
ಅಂದಿನ ಚುನಾವಣೆಯ ಹಿಂದಿನ ದಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನ ಇದೇ ಎಇಇ ಗೌಡರ, ಯೋಗೇಶಗೌಡ ಗೌಡರ ಮೇಲೆ ದಾಖಲು ಮಾಡಿದ್ದರಂತೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಡರ ಸಿಬಿಐ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನ ನೀಡಿದ್ದರಂತೆ.
ಇಂದು ಮತ್ತೆ ಗೌಡರಗೆ ಸಿಬಿಐನಿಂದ ಬುಲಾವ್ ಬಂದಿದ್ದು, ಗೌಡರ ಇಂದು ಹಾಜರಾಗಿದ್ದಾರೆ. ಮಾಜಿ ಸಚಿವರ ಸಮ್ಮುಖದಲ್ಲೇ ಮತ್ತೆ ಮಾಹಿತಿಯನ್ನ ಪಡೆಯಲಾಗತ್ತಾ ಎಂಬುದು ಹೊರಬರಬೇಕಾಗಿದೆ.