ಬಾರದ ಲೋಕಕ್ಕೆ ಹೊರಟು ನಿಂತ ಅಕ್ಷರಬ್ರಹ್ಮ ರವಿ ಬೆಳಗೆರೆ

ಬೆಂಗಳೂರು: ನೂರಾರೂ ಪತ್ರಕರ್ತರಿಗೆ ಸ್ಪೂರ್ತಿಯಾಗಿದ್ದ, ಸಾವಿರಾರು ಜನರಿಗೆ ಬದುಕುವ ಛಲ ಹುಟ್ಟಿಸುತ್ತಿದ್ದ ಅಕ್ಷರದ ಬ್ರಹ್ಮನೆಂದೆ ಖ್ಯಾತಿ ಪಡೆದಿದ್ದ ರವಿ ಬೆಳಗೆರೆ ಇಂದು ಬೆಳಗಿನ ಜಾವ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.
ಬಳ್ಳಾರಿಯ ರವಿ ಬೆಳಗೆರೆ ಅವರು ಕನ್ನಡದ ಟ್ಯಾಬೋಲ್ಯಾಯ್ಡ್ ಪತ್ರಿಕೆಯ ಮೂಲಕ ರಾಜ್ಯದ ಮನೆ ಮಾತಾಗಿದ್ದರು. ಅವರ ಬರವಣಿಗೆ ಸಾವಿರಾರೂ ಜನರ ನೆಮ್ಮದಿಗೆ ಕಾರಣವಾಗುತ್ತಿದ್ದರೇ, ಇವತ್ತಿನ ನೂರಾರೂ ಪತ್ರಕರ್ತರು ಅವರಂತಾಗಬೇಕು ಎಂದೇ ಜರ್ನಲಿಸಂಗೆ ಬಂದವರಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿರುವ ರವಿ ಬೆಳಗೆರೆ ಹಾಯ್ ಬೆಂಗಳೂರು ಪತ್ರಿಕೆ ಹಾಗೂ ಓ ಮನಸೆಯ ಜೊತೆಗೆ ಜನರೊಂದಿಗೆ ಬೆರೆತಿದ್ದರು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರವಿ ಬೆಳಗೆರೆ ಇಂದು ಬೆಳಗಿನ ಜಾವ ಇಲ್ಲವಾಗಿರುವುದು ಅಕ್ಷರ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಹುಬ್ಬಳ್ಳಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುತ್ತಲೇ ಕರ್ಮವೀರದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದ ರವಿ ಬೆಳಗೆರೆ, ಅವಳಿನಗರದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು.
ರವಿ ಬೆಳಗೆರೆ ಅವರಿಗೆ ಒಟ್ಟು ನಾಲ್ಕು ಮಕ್ಕಳು. 70 ಪುಸ್ತಕಗಳು ಪ್ರಕಟಗೊಂಡಿವೆ. ಪ್ರಾರ್ಥನಾ ಶಾಲೆಯನ್ನ ಕಟ್ಟಿ ಬೆಳೆಸಿದ ಕೀರ್ತಿಯನ್ನು ಬೆಳಗೆರೆ ಹೊಂದಿದ್ದರು.
ಪತ್ರಕರ್ತ ರವಿ ಬೆಳಗೆರೆ…. ಇನ್ನಿಲ್ಲವೆನ್ನುವುದೇ ದುರಂತ…