ಮೂರೇ ವಾರದಲ್ಲಿ ಪಂಚಾಯತಿ ಚುನಾವಣೆಗೆ ಡೇಟ್ ಫಿಕ್ಸ್ ಮಾಡಿ: ಹೈಕೋರ್ಟ್ ಕಟ್ಟಾಜ್ಞೆ
1 min readಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆ ನಡೆಸುವ ಬಗ್ಗೆ ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗದ ನಡುವೆ ಸೃಷ್ಠಿಯಾಗಿದ್ದ ಬಿಕ್ಕಟ್ಟಿಗೆ ಹೈಕೋರ್ಟ್ ತಾರ್ಕಿಕ ಅಂತ್ಯ ಕಾಣಿಸಿದ್ದು, ಮೂರೇ ವಾರದಲ್ಲಿ ಚುನಾವಣಾ ಆಯೋಗ ಗ್ರಾಮ ಪಂಚಾಯತಿ ಘೋಷಣೆ ಬಗ್ಗೆ ತೀರ್ಮಾನಿಸಬೇಕು. ಚುನಾವಣೆ ಮುಂದೂಡಿಕೆ ಬಗ್ಗೆ ರಾಜ್ಯ ಸರಕಾರ ನಿರ್ಧರಿಸುವಂತಿಲ್ಲ ಎಂದು ಹೈಕೋರ್ಟ ತೀರ್ಪು ನೀಡಿದೆ.
ಅಸಾಧಾರಣ ಸಮಯದಲ್ಲಿ ಚುನಾವಣೆಯನ್ನ ಮುಂದೂಡಬಹುದು. ಅದನ್ನೂ ಕೂಡಾ ಚುನಾವಣಾ ಆಯೋಗ ತೀರ್ಮಾನಿಸಬೇಕು. ಚುನಾವಣೆ ವಿಷಯದಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲದು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪನ್ನ ನೀಡಿದ್ದು, ಅವಧಿ ಮುಗಿದಿರುವ ಗ್ರಾಮ ಪಂಚಾಯತಿಗಳಿಗೆ ಮೂರು ವಾರದಲ್ಲಿ ಚುನಾವಣಾ ವೇಳಾಪಟ್ಟಿಯನ್ನ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ ನಿರ್ದೇಶನ ನೀಡಿದೆ.
ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಸೇರಿದಂತೆ ಮತ್ತಿತರರು, ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಶೀಘ್ರ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಪಿಐಎಲ್ ಸಲ್ಲಿಸಿದ್ದರು.
ಇದೇ ಪಿಐಎಲ್ ನ ವಿಚಾರಣೆಯ ವೇಳೆಯಲ್ಲಿ ಹೈಕೋರ್ಟ ನಿರ್ದೇಶನ ನೀಡಿದೆ. ಚುನಾವಣಾ ಆಯೋಗಕ್ಕೆ ರಾಜ್ಯ ಸರಕಾರ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ಅಗತ್ಯ ಬಿದ್ದರೇ ಆಯೋಗ ರಾಜ್ಯಪಾಲರನ್ನ ಸಂಪರ್ಕ ಮಾಬೇಕೆ ಹೊರತು ರಾಜ್ಯ ಸರಕಾರವನ್ನಲ್ಲ ಎಂದು ಹೈಕೋರ್ಟ ಸ್ಪಷ್ಟಪಡಿಸಿದೆ.