ಇಸ್ಪೀಟ್ ರೇಡ್: ನಿವೃತ್ತ ಡಿವೈಎಸ್ಪಿ, ಕೆಎಸ್ಸಾರ್ಟಿಸಿ ಡಿಸಿ ಪರಾರಿ: ನಿವೃತ್ತ ಡಿಡಿಪಿಐ ಬಂಧನ- ಲಿಸ್ಟ್ ಸಮೇತ ಕರ್ನಾಟಕವಾಯ್ಸ್.ಕಾಂ ಎಕ್ಸಕ್ಲೂಸಿವ್ ವರದಿ
ಧಾರವಾಡ: ಇಡೀ ರಾಜ್ಯವೇ ದೀಪಾವಳಿ ಸಮಯದಲ್ಲಿ ಧಾರವಾಡದತ್ತ ಹೊರಳಿ ನೋಡುವಂತೆ ಮಾಡಿದ ಪೊಲೀಸ್ ರೇಡನಲ್ಲಿ ಕೇವಲ ರಾಜಕಾರಣಿಗಳಿಲ್ಲ. ಬದಲಿಗೆ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳು, ಸಿಕ್ಕಿಬಿದ್ದಿದ್ದಾರೆ. ಈ ರೇಡನಲ್ಲಿ ಸಿಕ್ಕಿರುವ ವಾಹನಗಳ ಅಂದಾಜು ಮೌಲ್ಯ ಬರೋಬ್ಬರಿ 93 ಲಕ್ಷ 50 ಸಾವಿರ ರೂಪಾಯಿಯದ್ದಾಗಿದೆ.
ಈ ಅಂದರ್-ಬಾಹರ್ ಆಟವನ್ನ ಸುಧಾಕರ ಶೆಟ್ಟಿ, ಮಹೇಶ ಶೆಟ್ಟಿ, ಅಶೋಕ ಶೆಟ್ಟಿ ಹಾಗೂ ಯತಿರಾಜ ಶೆಟ್ಟಿ ಜೂಜಾಟದ ವ್ಯವಸ್ಥೆಯನ್ನ ಮಾಡಿದ್ದರು. ಅಷ್ಟೇ ಅಲ್ಲ, ಹೈಕೋರ್ಟನ ನಿಯಮಗಳನ್ನ ಮೀರಿ ದಂಧೆ ನಡೆಸುತ್ತಿದ್ದರು. ಅಂದರ್-ಬಾಹರ್ ಜೊತೆಗೆ ತ್ರೀ ಕಾರ್ಡ ಆಟವೂ ನಡೆಯುತ್ತಿತ್ತೆಂದು ಪೊಲೀಸರು ದಾಖಲು ಮಾಡಿದ್ದಾರೆ.
ಸುಧಾಕರ ಶೆಟ್ಟಿ ಮೊದಲ ಆರೋಪಿಯಾಗಿದ್ದು, ನಿವೃತ್ತ ಡಿವೈಎಸ್ಪಿ ತುಂಗಳ, ಕೆಎಸ್ಆರ್ ಟಿಸಿ ಡಿಸಿ, ಕ್ರಿಕೆಟ್ ಬುಕ್ಕಿ ದೇವಗನ ಅಲಿಯಾಸ್ ಶಂಕರ ವಾಲ್ಮೀಕಿ, ಜೂಜಾಟದ ವ್ಯವಸ್ಥೆ ಮಾಡಿದ ಅಶೋಕ ಶೆಟ್ಟಿ, ಯತಿರಾಜ ಶೆಟ್ಟಿ ಪರಾರಿಯಾಗಿದ್ದಾರೆ.
ಇಸ್ಪೀಟ್ ಆಡುತ್ತಿದ್ದಾಗ ಸಿಸಿಟಿವಿ ಕ್ಯಾಮರಾಗಳನ್ನ ಬಂದ್ ಮಾಡಿ ದಂಧೆಯನ್ನ ನಡೆಸುತ್ತಿದ್ದರು ಎಂಬುದನ್ನ ಪ್ರಕರಣದಲ್ಲಿ ನಮೂದು ಮಾಡಲಾಗಿದೆ. ನಿವೃತ್ತ ಡಿಡಿಪಿಐ ವಿ.ಎಂ.ಪಾಟೀಲ, ಹವಾಲಾ ಕುಳ ಸಮುಂದರಸಿಂಗ್, ಲಲಿತ ಜೈನ್ ಸೇರಿದಂತೆ ಒಟ್ಟು 61 ಜನರ ಮೇಲೆ ಪ್ರಕರಣ ದಾಖಲಾಗಿದೆ.
ದಾಳಿಯ ವೇಳೆಯಲ್ಲಿ 4858000 ರೂಪಾಯಿ, 6 ಸೆಟ್ ಇಸ್ಪೀಟ್, 49 ಮೊಬೈಲ್, 33 ಕಾರುಗಳು, 42 ಖಾಲಿ ಬೀರ ಬಾಟಲ್, 16 ಖಾಲಿ ಬ್ರಿಸ್ಟಾಲ್ ಮತ್ತು ಗೋಲ್ಡ್ ಪ್ಲೇಕ್ ಸಿಗರೇಟ್, 7 ಆಶ್ ಟ್ರೇ, 35 ಉಪಯೋಗಿಸಿದ ಸಿಗರೇಟಿನ ತುಂಡುಗಳು, 5 ರೌಂಡ ಟೇಬಲಗಳು, 53 ಕಟ್ಟಿಗೆ ಹಾಗೂ ಪ್ಲಾಸ್ಟಿಕ್ ಖುರ್ಚಿಗಳನ್ನ ವಶಕ್ಕೆ ಪಡೆಯಲಾಗಿದೆ.