ಇಸ್ಮಾಯಿಲ ತಮಾಟಗಾರ ವಿರುದ್ಧ ಪ್ರಕರಣ: ಇಮ್ರಾನ ಕಳ್ಳಿಮನಿ ಆಕ್ರೋಶ
ಧಾರವಾಡ: ನಗರದ ಹೊರವಲಯದಲ್ಲಿ ನಡೆದ ಇಸ್ಪೀಟ್ ರೇಡ್ ಪ್ರಕರಣ ದಿನೇ ದಿನೇ ಬೇರೆಯದೇ ಸ್ವರೂಪ ಪಡೆಯುತ್ತಿದ್ದು, ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ ತಮಾಟಗಾರ ವಿರುದ್ಧ ಪ್ರಕರಣ ದಾಖಲು ಮಾಡಿರುವುದಕ್ಕೆ ಕಾಂಗ್ರೆಸನ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇಸ್ಮಾಯಿಲ ತಮಾಟಗಾರ ಸಮುದಾಯದ ನಾಯಕ. ವಿಧಾನಸಭೆ ಚುನಾವಣೆಯ ಅಭ್ಯರ್ಥಿಯಾಗಿದ್ದವರು. ಎಲ್ಲರೂ ಪೂಜೆಗೆ ಕರೆದಿರುತ್ತಾರೆ. ರಮ್ಯ ರೆಸಿಡೆನ್ಸಿಗೆ ಪೂಜೆಗೆ ಹೋದಾಗ ತಡವಾಗಿದೆ. ಅಷ್ಟೇ. ಅದೇ ಸಮಯದಲ್ಲಿ ಪೊಲೀಸರು ರೇಡ್ ಮಾಡಿದ್ದಾರೆ. ಪರಿಚಯದವರೊಂದಿಗೆ ಕೂತರೇ, ಅವರನ್ನೂ ಜೂಜು ಆಡುತ್ತಾರೆ ಎನ್ನುವುದು ತಪ್ಪು ಎಂದು ಕಳ್ಳಿಮನಿ ಹೇಳಿದ್ದಾರೆ.
ನಾನು ಅಂಜುಮನ್ ಚುನಾವಣೆಯಲ್ಲಿ ಅವರ ವಿರುದ್ಧ ಚುನಾವಣೆ ಮಾಡಿದ್ದೇನೆ. ಆದರೆ, ಸಮುದಾಯ ಎಂದು ಬಂದಾಗ ನಾವೂ ಎಲ್ಲರೂ ಒಂದೇ. ಸಮುದಾಯದ ಮುಖಂಡನ ಹೆಸರು ಕೆಡಿಸಲು ಮುಂದಾಗಿರುವವರ ವಿರುದ್ಧ ನಾವೂ ಸುಮ್ಮನೆ ಕೂರುವುದಿಲ್ಲ ಎಂದಿದ್ದಾರೆ.
ಸಮುದಾಯದ ನಾಯಕ ವಿರುದ್ಧ ತಜೋವಧೆ ಮಾಡಲು ಮುಂದಾದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಇಮ್ರಾನ ಕಳ್ಳಿಮನಿ ಎಚ್ಚರಿಕೆ ನೀಡಿದ್ದಾರೆ.