ಹುಬ್ಬಳ್ಳಿಯ ವಿಐಪಿ ರಸ್ತೆಯಲ್ಲೇ ಅವಘಡ- ಏನೋ ಮಾಡಲು ಮತ್ತೇನೋ ಮಾಡಿಕೊಂಡ ಚಾಲಕ

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ವೊಂದು ರಸ್ತೆ ವಿಭಜಕಕ್ಕೆ ಗುದ್ದಿದ ಘಟನೆ ನಗರದ ಗೋಕುಲ ರಸ್ತೆಯಲ್ಲಿ ನಡೆದಿದ್ದು, ವಿಐಪಿಗಳು ಸಂಚರಿಸುವ ರಸ್ತೆಯಲ್ಲೇ ಅಸ್ತವ್ಯಸ್ತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೊಸಪೇಟೆಯಿಂದ ಗೋವಾಗೆ ಸ್ಪಂಜ್ ತುಂಬಿಕೊಂಡು
ಹೊರಟಿದ್ದ ಟ್ರಕ್ ರಸ್ತೆ ಮದ್ಯ ಬಂದ ಬೈಕ್ ಸವಾರರನನ್ನು ತಪ್ಪಿಸಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಆಗಮಿಸಿದ ಪೋಲಿಸ್ ಸಿಬ್ಬಂದಿ ಪರಿಶೀಲನೆ ನಡೆಸಿ ಟ್ರಕ್ ಹೊರೆ ತೆಗೆಯುವ ಕಾರ್ಯ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ, ಈ ಕುರಿತು ಗೋಕುಲ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಸವಾರ ಸಡನ್ನಾಗಿ ಎದುರಿಗೆ ಬಂದಿದ್ದರಿಂದಲೇ ಘಟನೆ ನಡೆದ ಬಗ್ಗೆ ಸಂಚಾರಿ ಠಾಣೆ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.