ಕೆಎಸ್ಸಾರ್ಟಿಸಿ ಬಸ್ ಲಾರಿಗೆ ಡಿಕ್ಕಿ-ಓರ್ವನ ಸಾವು: ಬಸ್ ಚಾಲಕನೇ ಅಪರಾಧಿ
ಧಾರವಾಡ: ಗದಗ ಕಡೆಯಿಂದ ವೇಗವಾಗಿ ತಾನಿದ್ದ ಕೆಎಸ್ಸಾರ್ಟಿಸಿ ಬಸ್ ಚಲಾಯಿಸುತ್ತಿದ್ದ ಚಾಲಕ, ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ತಾನೂ ಸೇರಿದಂತೆ ಮೂವರು ಗಾಯಗೊಂಡ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದ ಬಳಿ ಸಂಭವಿಸಿದೆ.
ಘಟನೆಯಲ್ಲಿ ಬಸ್ ಚಾಲಕ ಮುಧೋಳ ತಾಲೂಕಿನ ಲೋಕಾಪೂರ ಗ್ರಾಮದ ಬೆಳಗಾವಿ ಡೀಪೋದ ಚಾಲಕ ಮಾರುತಿ ಲಮಾಣಿ, ಬೆಳಗಾವಿ ಜಿಲ್ಲೆ ನೇಸರಗಿ ಗ್ರಾಮದ ನಿರ್ಮಾಹಕ ಮಲ್ಲಿಕಾರ್ಜುನ ಮಾಲಣ್ಣನವರ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಚಾಲಕನ ಬಳಿ ಕುಳಿತಿದ್ದ ಹುಬ್ಬಳ್ಳಿ ನೇಕಾರನಗರದ ನಿವಾಸಿ ಓಂಕಾರ ಗೊಂದಕರ ಸಾವಿಗೀಡಾಗಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಿಗೇರಿ ಠಾಣೆಯ ಸಬ್ ಇನ್ಸಪೆಕ್ಟರ್ ಎಲ್.ಕೆ.ಜೂಲಕಟ್ಟಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಬಸ್ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆನ್ನುವುದನ್ನ ನಮೂದು ಮಾಡಿದ್ದಾರೆ. ಘಟನೆಯಲ್ಲಿ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಓಂಕಾರನ ಸಹೋದರ ಸುನೀಲ ಗೋಂದಕರ ದೂರು ನೀಡಿದ್ದು, ಪಿಎಸೈ ಜೂಲಕಟ್ಟಿ ತನಿಖೆ ನಡೆಸುತ್ತಿದ್ದಾರೆ.