ಬಂಡಿವಾಡ ಬಳಿ ಅಪಘಾತವಾಗಿದ್ದು ಮಾಜಿ ಸಚಿವೆ ಉಮಾಶ್ರೀ ಇನ್ನೋವ್ವಾ..

ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಬಳಿ ನಡೆದಿರುವ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಇನ್ನೋವ್ವಾ ಕಾರು ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ್ದಾಗಿದ್ದು, ನಾಳೆ ಇದೇ ವಾಹನದಲ್ಲಿ ಅವರು ಬರುವರಿದ್ದರು ಎಂದು ಹೇಳಲಾಗಿದೆ.
ಬಂಡಿವಾಡ ಬಳಿಯ ಇನ್ನೋವ್ವಾ ಕಾರು ಉಮಾಶ್ರೀಯವರ ಹೆಸರಿನಲ್ಲಿದ್ದು ಬಲೆನೋ ವಾಹನ ಡಾ.ಸ್ಮಿತಾ ಕಟ್ಟಿಯವರ ಹೆಸರಿನಲ್ಲಿದೆ. ಕಿಮ್ಸಗೆ ತೆಗೆದುಕೊಂಡು ಹೋಗಿದ್ದ ಸ್ಮಿತಾ ಕಟ್ಟಿಯವರನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಎರಡು ವಾಹನಗಳ ನಡುವೆ ನಡೆದಿರುವ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ತೀವ್ರ ಗಾಯಗೊಂಡಿದ್ದಾರೆ. ಬಲೇನೋದಲ್ಲಿ ಚಾಲಕನ ಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೃತಪಟ್ಟವರ ಮಾಹಿತಿ ಇನ್ನೂ ಲಭಿಸಬೇಕಿದೆ.
ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ ಸ್ಥಳದಲ್ಲಿಯೇ ಇದ್ದು ಸಂಚಾರ ವ್ಯವಸ್ಥೆಯನ್ನ ಸರಿ ಮಾಡುತ್ತಿದ್ದು, ಕೆಲವೇ ಸಮಯದಲ್ಲಿ ಇನ್ನುಳಿದ ಮಾಹಿತಿ ಲಭ್ಯವಾಗಲಿದೆ. ಉಮಾಶ್ರೀಯವರ ಕಾರಿನಲ್ಲಿ ಕೆಲವು ಡಾಕುಮೆಂಟುಗಳಿದ್ದು, ಅವೆಲ್ಲವೂ ಉಮಾಶ್ರೀಯವರಿಗೆ ಸಂಬಂಧಿಸಿದ್ದಾಗಿವೆ ಎಂದು ಖಚಿತ ಮಾಹಿತಿ ಲಭಿಸಿದೆ.