ಅವತ್ತು ರೇಡ್ ಲ್ಲಿ ಬಿಟ್ಟ ‘ಆ’ ಅರಣ್ಯ ಇಲಾಖೆ ಅಧಿಕಾರಿ ಯಾರೂ..? ಅವರು ಪೋನ್ ಮಾಡಿದ್ದು ಯಾರಿಗೆ..!

ಧಾರವಾಡ: ನಗರದ ಹೊರವಲಯದಲ್ಲಿ ದೀಪಾವಳಿ ದಿನ ನಡೆದ ಅಂದರ್-ಬಾಹರ್ ಪ್ರಕರಣ ಒಳಗೊಳಗೆ ಬೇಗುದಿಯನ್ನ ಹೆಚ್ಚಿಸುತ್ತಿದ್ದು, ಅಂದು ರೇಡ್ ಮುನ್ನ ಲಕ್ಷಾಂತರ ರೂಪಾಯಿಟ್ಟುಕೊಂಡು ಇಸ್ಪೀಟ್ ಎಲೆ ತಟ್ಟಿದ ಅರಣ್ಯ ಇಲಾಖೆಯ ಅಧಿಕಾರಿ ಯಾರಿಗೋ ಪೋನ್ ಮಾಡಿ, ಅಲ್ಲಿದ್ದ ಅಧಿಕಾರಿಯೋರ್ವರಿಗೆ ಕೊಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಪ್ರಕರಣದಲ್ಲಿ ಹೆಸರು ಬಂದವರೊಬ್ಬರು ಕರ್ನಾಟಕವಾಯ್ಸ್.ಕಾಂಗೆ ಮಾಹಿತಿ ನೀಡಿದ್ದಾರೆ.
ಧಾರವಾಡ ವಲಯದಲ್ಲೇ ಕಾರ್ಯನಿರ್ವಹಿಸುವ ‘ಆ’ ಅರಣ್ಯ ಇಲಾಖೆಯ ಅಧಿಕಾರಿ ಟೇಬಲ್ ನಂಬರ ಮೂರರಲ್ಲಿ ಮೊದಲು ಕುಳಿತಿದ್ದರು. ನಂತರ ಟೇಬಲ್ ಬದಲಾವಣೆ ಮಾಡಿದರು. ಆಗಲೂ ಅವರ ಬಳಿ ಲಕ್ಷಾಂತರ ರೂಪಾಯಿ ಇತ್ತೆಂದು ಹೇಳಲಾಗಿದೆ.
ಅಂದರ್-ಬಾಹರ್ ನಡೆಯುತ್ತಿದ್ದಾಗಲೇ ರೇಡ್ ಆಗಿತ್ತು. ಆಗಲೂ ಆ ಅಧಿಕಾರಿಯಿದ್ದರು. ತಕ್ಷಣವೇ ಅವರು ಯಾವುದೋ ಅಧಿಕಾರಿಗೆ ಮೊಬೈಲ್ ಮೂಲಕ ಕಾಲ್ ಮಾಡಿ, ಅಲ್ಲಿಯೇ ಇದ್ದ ಓರ್ವ ಇನ್ಸಪೆಕ್ಟರಗೆ ಕೊಟ್ಟರು.. ಅಷ್ಟೇ.. ಆಮೇಲೆ ಆ ಅಧಿಕಾರಿಯ ಬಂಧನವೂ ಆಗಲಿಲ್ಲ, ಪರಾರಿಯ ಹೆಸರಲ್ಲೂ ಬಂದಿಲ್ಲ ಎಂದು ಹೇಳಲಾಗಿದೆ.
ಐಜಿಪಿಯವರ ಸೂಚನೆಯ ಮೇರೆಗೆ ನಡೆದ ಈ ರೇಡನಲ್ಲಿ ಕೆಳ ಮಟ್ಟದ ಅಧಿಕಾರಿಗಳು ಹೀಗೆ ಮಾಡಿದ್ದನ್ನ ರಾಘವೇಂದ್ರ ಸುಹಾಸ ಅವರು ತಿಳಿದುಕೊಳ್ಳಬೇಕಿದೆ. ಇಲ್ಲದಿದ್ದರೇ ಇದು ಕೆಲವೇ ಕೆಲವರ ಹೆಸರು ಕೆಡಿಸಲು ನಡೆಸಿದ ಯತ್ನ ಎಂಬ ವದಂತಿ ಸತ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.