ರಮೇಶ ಬಾಂಢಗೆ ಹತ್ಯೆ- ಅದು ಸುಫಾರಿ ಕೊಲೆ- 25ಲಕ್ಷ ರೂಪಾಯಿಗೆ ನಡುಬೀದಿಯಲ್ಲೇ ಹೆಣ ಬೀಳಿಸಿದ್ದ..
1 min readಹುಬ್ಬಳ್ಳಿ: ನಗರದ ಬಾಬಾಸಾನಗಲ್ಲಿ ನಡೆದ ರಮೇಶ ಬಾಂಢಗೆ ಕೊಲೆ ಪ್ರಕರಣಕ್ಕೆ ಸಿಕ್ಕ ಟ್ವಿಸ್ಟನ್ನ ಸರಿಯಾಗಿಯೇ ಬಳಸಿಕೊಂಡ ಶಹರ ಠಾಣೆಯ ಪೊಲೀಸರು, ಇದು ಸುಫಾರಿ ಕೊಲೆ ಎಂಬುದನ್ನ ಪತ್ತೆ ಹಚ್ಚಿ, ಹತ್ಯೆಗೆ ಸುಫಾರಿ ನೀಡಿದ ಐವರನ್ನೂ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ಟಿಐ ಕಾರ್ಯಕರ್ತನಾಗಿದ್ದ ರಮೇಶ ಬಾಂಢಗೆ ಕೊಲೆಯನ್ನ ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದ ಸಾರಿಗೆ ಇಲಾಖೆಯ ನೌಕರ ಇಜಾಜಅಹ್ಮದ ಬಂಕಾಪುರನನ್ನ ಪೊಲೀಸರು ಅರೆಸ್ಟ್ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸುಮ್ಮನೆ ಕೂತಿದ್ದರೇ, ಸುಫಾರಿ ಕೊಲೆಯೊಂದು ಪತ್ತೆಯಾಗುತ್ತಿರಲಿಲ್ಲ. ಬದಲಿಗೆ ಬಂಧಿತನಾಗಿದ್ದ ಆರೋಪಿಯ ಕಾಲ್ ಡಿಟೇಲ್ ತೆಗೆದಾಗ, ಇದು ಕೊಲೆಯಲ್ಲ, ಇದರ ಹಿಂದೆ ಬೇರೆಯದ್ದೇ ರೂಪವಿದೆ ಎಂದು ಬೆನ್ನು ಹತ್ತಿದ್ದರು.
ಶಹರ ಠಾಣೆಯ ತಂಡವೊಂದು ಪ್ರತಿಯೊಂದನ್ನು ಹೆಣೆದು ಹೆಣೆದು ಪೋಣಿಸಿದಾಗ, ಇದು ಸುಫಾರಿ ಕೊಲೆಯಂದು, ಇದಕ್ಕೆ 25 ಲಕ್ಷ ರೂಪಾಯಿ ಕೊಡಲಾಗಿದೆಯಂದು ಪತ್ತೆಯಾಗಿದೆ. ಇದಕ್ಕೆ ಸುಫಾರಿ ನೀಡಿದ, ಹಳೇಹುಬ್ಬಳ್ಳಿ ಸದರಸೋಪಾ ನಿವಾಸಿ ರಫೀಕ ಅನ್ವರಸಾಬ ಜವಾರಿ, ವಸೀಮ ಖಾಜಾಸಾಬ ಬಂಕಾಪುರ, ಶಿವಾಜಿ ದೇವೆಂದ್ರಪ್ಪ ಮಿಶಾಳ, ಮಯೂರನಗರದ ಫೈಯಾಜಅಹ್ಮದ ಜಾಫರಸಾಬ ಪಲ್ಲಾನ ಹಾಗೂ ಮಹಾವೀರನಗರದ ತೌಶೀಫ ಮಹ್ಮದಇಸಾಕ ನರಗುಂದ ಎಂಬುವವರನ್ನ ಬಂಧನ ಮಾಡಲಾಗಿದೆ.
ಬಂಧಿತರಿಂದ 6ಲಕ್ಷ 10ಸಾವಿರ ರೂಪಾಯಿ, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಹಾಗೂ 5 ಮೊಬೈಲಗಳನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ದಿನಗಳಿಂದ ನಿರಂತರವಾಗಿ ತನಿಖೆಯಲ್ಲಿ ತೊಡಗಿದ್ದ ಇನ್ಸಪೆಕ್ಟರ್ ಎಂ.ಎಸ್.ಪಾಟೀಲ, ಪಿಎಸ್ಐ ಬಿ.ಎನ್.ಸತ್ಯಣ್ಣನವರ, ಎಂ.ಎ.ಅಯ್ಯನಗೌಡರ, ಸಿ.ಎಸ್.ಚೆಲವಾದಿ, ಸದಾನಂದ ಕಲಘಟಗಿ, ಕೃಷ್ಣಾ ಕಟ್ಟಿಮನಿ, ಎಸ್.ಬಿ.ಕಟ್ಟಿಮನಿ, ಎಸ್.ವ್ಹಿ.ಯರಗುಪ್ಪಿ, ಎಸ್.ಕೆ.ಇಂಗಳಗಿ, ಎಚ್.ಬಿ.ನಂದೇರ, ಕೆ.ಎಚ್.ರಗಣಿ, ಮಾರುತಿ ಬಸಣ್ಣನವರ ಈ ಸುಫಾರಿ ಹಂತಕರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನ ಶ್ಲಾಘೀಸಿ, ಬಹುಮಾನ ಘೋಷಣೆ ಮಾಡಿದ್ದಾರೆ.