ಪೊಲೀಸನ ತಲೆಗೆ ಹೊಡೆದಿದ್ದ ಹುಬ್ಬಳ್ಳಿ ರೌಡಿ ಷೀಟರ್: ಮಾಡಿದ ಡ್ರಾಮಾ ಎಂತಹದು ಗೊತ್ತಾ..!

ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ರೇಲ್ವೆ ಪೊಲೀಸ್ ಪೇದೆಯೋರ್ವರಿಗೆ ಹೊಡೆದು ಆಸ್ಪತ್ರೆಗೆ ದಾಖಲು ಮಾಡುವಂತೆ ಮಾಡಿ, ಪರಾರಿಯಾಗಿದ್ದ ರೌಡಿ ಷೀಟರನನ್ನ ಹಿಡಿಯಲು ಹೋದಾಗ, ಹಲವು ರೀತಿಯ ಡ್ರಾಮಾಗಳನ್ನ ಮಾಡಿದ್ದಕ್ಕಾಗಿ, ಪೊಲೀಸರು ಹಗ್ಗ ಕಟ್ಟಿಕೊಂಡು ಬಂದು ರೇಲ್ವೆ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಷೀಟರ್ ವಿಜಯ ಹರಿಜನ ಕೆಲವು ದಿನಗಳ ಹಿಂದೆ, ರೇಲ್ವೆ ಇಲಾಖೆಯ ಪೊಲೀಸರೋರ್ವರಿಗೆ ತಲೆಗೆ ಹೊಡೆದಿದ್ದ. ಇದರಿಂದ ಪೊಲೀಸರಿಗೆ ಮೂರು ಹೊಲಿಗೆ ಹಾಕಿ, ಹಲವು ದಿನಗಳವರೆಗೆ ಚಿಕಿತ್ಸೆ ನೀಡಲಾಗಿತ್ತು. ಕೃತ್ಯವೆಸಗಿದ್ದ ವಿಜಯ, ಅಂದಿನಿಂದ ಪರಾರಿಯಾಗಿದ್ದ.
ವಿಜಯ ಮತ್ತೆ ಮರಳಿದ್ದಾನೆಂದು ಗೊತ್ತಾದ ತಕ್ಷಣವೇ ಬೆಂಡಿಗೇರಿ ಠಾಣೆ ಪೊಲೀಸರಿಗೆ ರೇಲ್ವೆ ಪೊಲೀಸರು ಮಾಹಿತಿ ನೀಡಿದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆತನನ್ನ ಹಿಡಿಯಲು ಹೋದಾಗ ತಲೆ ಜಜ್ಜಿಕೊಳ್ಳುವುದು, ಕೈ ಕಡಿದುಕೊಳ್ಳುವ ಡ್ರಾಮಾ ಆರಂಭಿಸಿದ್ದಾನೆ. ಇಂತಹ ಹಲವು ಡ್ರಾಮಾಗಳನ್ನ ನೋಡಿರುವ ಬೆಂಡಿಗೇರಿ ಠಾಣೆಯ ಪೊಲೀಸರು, ರೌಡಿ ಷೀಟರಗೆ ಹಗ್ಗ ಕಟ್ಟಿಕೊಂಡು ಠಾಣೆಗೆ ಕರೆತಂದಿದ್ದಾರೆ.
ಐಪಿಸಿ ಸೆಕ್ಷನ್ 350 ಪ್ರಕರಣದಲ್ಲಿ ಬೇಕಾಗಿದ್ದ ವಿಜಯ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಉಳಿಸಿಕೊಳ್ಳಲು ಮಾಡಿದ ಪ್ರಯತ್ನವೂ ವಿಫಲವಾಗಿ, ಕಂಬಿ ಹಿಂದೆ ಹೋಗಿದ್ದಾನೆ.