ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು: ತೀರ್ಪು 14ಕ್ಕೆ

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ನಿರ್ಧಾರವನ್ನ ನ್ಯಾಯಾಲಯ ಡಿಸೆಂಬರ್ 14ಕ್ಕೆ ನಿಗದಿ ಮಾಡಿದೆ.
ಕಳೆದ ನವೆಂಬರ್ 5ರಂದು ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಇಂದು ವಾದ-ವಿವಾದಗಳು ನಡೆದವು. ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಜಾಮೀನು ನೀಡದಂತೆ ಸಿಬಿಐ ಕೇಳಿಕೊಂಡಿತು.
ಕೇಂದ್ರ ಸರ್ಕಾರದ ಪರವಾಗಿ ಅಡಿಶನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ವೀಡಿಯೋ ಕಾನ್ಪರೆನ್ಸ ಮೂಲಕ ದೆಹಲಿಯಿಂದ ವಾದ ಮಂಡನೆ ಮಾಡಿದ್ರು. ಇದೇಲ್ಲವನ್ನ ಸವಿಸ್ತಾರವಾಗಿ ಆಲಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ತೀರ್ಪನ್ನ ಡಿಸೆಂಬರ್ 14ಕ್ಕೆ ನಿಗದಿ ಮಾಡಿ ಮುಂದೂಡಿದೆ.
ಡಿಸೆಂಬರ್ 14ಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಜಾಮೀನು ಸಿಗತ್ತಾ ಅಥವಾ ಇಲ್ಲವೋ ಎಂಬುದು ನಿಖರವಾಗಿ ಗೊತ್ತಾಗಲಿದೆ. ಈಗಾಗಲೇ ವಿನಯ ಕುಲಕರ್ಣಿಯವರು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವುದನ್ನ ಇಲ್ಲಿ ಸ್ಮರಿಸಬಹುದು.