ಹುಬ್ಬಳ್ಳಿಯಲ್ಲಿ “ಬಡಾ” ಉದ್ಯಮಿ ಮೇಲೆ ಐಟಿ ರೇಡ್
1 min readಹುಬ್ಬಳ್ಳಿ: ವಾಣಿಜ್ಯನಗರಿಯ ಪ್ರತಿಷ್ಠಿತ ಉಧ್ಯಮಿಯಾದ ಜೀತೇಂದ್ರ ಮಜೇತಿಯಾ ಒಡೆತನದ ಅತುಲ್ ಏಜೆನ್ಸಿ ಮೇಲೆ ಐಟಿ ದಾಳಿ ನಡೆದಿದ್ದು, ಕೋಟ್ಯಾಂತರ ರೂಪಾಯಿಯ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ಶೀಲವಂತರ ಓಣಿಯಲ್ಲಿರುವ ಅತುಲ್ ಏಜೆನ್ಸಿಯ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದೆ. ಬೆಳಗಾವಿ ಹಾಗೂ ದೆಹಲಿ ಮೂಲದ ಅಧಿಕಾರಿಗಳು ಎರಡು ವಾಹನದಲ್ಲಿ ಬಂದು ತಪಾಸಣೆ ನಡೆಸುತ್ತಿದ್ದಾರೆ.
ಐಟಿ ದಾಳಿ ವೇಳೆಯಲ್ಲಿ ಕಚೇರಿಯಲ್ಲಿನ ಸಿಬ್ಬಂದಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ದಾಳಿಯ ಬೆನ್ನತ್ತಿ ಹುಬ್ಬಳ್ಳಿಗೆ ಅಧಿಕಾರಿಗಳು ಬಂದಿದ್ದು, ಸುಮಾರು ಮೂರು ಗಂಟೆಯಿಂದ ತನಿಖೆ ನಡೆಯುತ್ತಿದೆ. ಪ್ರಮುಖವಾಗಿ ಇಬ್ಬರು ಮಹಿಳಾ ಸಿಬ್ಬಂದಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆನ್ನಲಾಗಿದೆ.
ಅತುಲ್ ಏಜೆನ್ಸಿಯು ಹಲವು ವರ್ಷಗಳಿಂದ ತಂಬಾಕು ಪದಾರ್ಥಗಳ ಹೋಲ್ ಸೇಲ್ ವ್ಯವಹಾರ ಮಾಡುತ್ತಿದೆ.