ಕೇಂದ್ರ ಮಂತ್ರಿಯಿಂದ ಶಹಬ್ಬಾಸ್ ಎನಿಸಿಕೊಂಡ ‘ಸಿಓಪಿ’ ಲಾಬುರಾಮ್
1 min readಹುಬ್ಬಳ್ಳಿ: ಕಳೆದ ಐದಾರು ವರ್ಷದಿಂದ ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸ್ ವ್ಯವಸ್ಥೆ ಜನರಿಂದ ಸಾಕಷ್ಟು ದೂರವಾಗಿತ್ತು. ನೀವೂ ಬಂದ ನಂತರ ಒಳ್ಳೆಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ನನಗೆ ಇದರಿಂದ ಸಾಕಷ್ಟು ಖುಷಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಕಾರ್ಯವೈಖರಿಯನ್ನ ಶ್ಲಾಘಿಸಿದರು.
ಹುಬ್ಬಳ್ಳಿಯ ಸರ್ಕೀಟ್ ಹೌಸದಲ್ಲಿ ನಡೆದ ಸ್ಮಾರ್ಟ್ ಸಿಟಿ ಸಭೆಯಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಇಂತಹ ಘಟನೆ ನಡೆಯಿತು. ಕಳೆದ ಐದಾರು ವರ್ಷದಿಂದ ಪೊಲೀಸ್ ವ್ಯವಸ್ಥೆ ಹದಗೆಟ್ಟು ಹೋಗಿತ್ತು. ನಮ್ಮೂರನ್ನ ಸುಧಾರಿಸೋಕೆ ಆಗ್ತಿಲ್ಲ ಎಂಬ ಕೊರಗಿತ್ತು. ಈಗ ನೀವೂ ಅದನ್ನ ಸರಿಯಾಗಿ ನಿಭಾಯಿಸುತ್ತಿದ್ದೀರಿ. ಜನಾಭಿಪ್ರಾಯ ಕೂಡಾ ನಿಮ್ಮ ಬಗ್ಗೆ ಚೆನ್ನಾಗಿದೆ ಎಂದು ಪ್ರಲ್ಹಾದ ಜೋಶಿಯವರು ಹೇಳಿದಾಗ, ಕಮೀಷನರ್ ಲಾಬುರಾಮ್ ಅವರು ಹಸನ್ಮುಖಿಯಾಗಿ ವಂದನೆ ಸಲ್ಲಿಸಿದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಆರ್.ದಿಲೀಪ್ ಅವರು ಬಂದಾಗಲಂತೂ ಹಲವು ಸಮಸ್ಯೆಗಳು ಉದ್ಭವಿಸಿದ್ದವು. ಡಿಸಿಪಿ ಹಾಗೂ ಪೊಲೀಸ್ ಕಮೀಷನರ್ ಕೋಲ್ಡ್ ವಾರ್ ಗೆ ಇಳಿದರು. ಇದರಿಂದ ಪೊಲೀಸ್ ಇಲಾಖೆಯ ಗೌರವ ಬೀದಿಗೆ ಬಂದಿತ್ತು. ಆಗ, ವರ್ಗಾವಣೆಯಾಗಿ ಬಂದವರೇ ಈ ದಕ್ಷ ಅಧಿಕಾರಿ ಐಪಿಎಸ್ ಲಾಬುರಾಮ್.
ಕಮೀಷನರ್ ಲಾಬುರಾಮ್ ಅವರು ಒಂದೊಂದೇ ಸಮಸ್ಯೆಯನ್ನ ಬಗೆಹರಿಸಲು ಮುಂದಾಗಿದ್ದು, ಇಲಾಖೆಯಲ್ಲಿ ಸಮನ್ವಯತೆಯನ್ನ ತರುತ್ತಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕಡಿವಾಣ ಹಾಕಲು ಮುಂದಾಗುತ್ತಿದ್ದಾರೆ.