ಧಾರವಾಡದಿಂದ ಕೂಡಲಸಂಗಮಕ್ಕೆ ಹೊರಟ ಪಂಚಮಸಾಲಿ ಪ್ರಮುಖರು..
1 min readಧಾರವಾಡ: ಪಂಚಮಸಾಲಿ ಸಮಾಜವನ್ನ ರಾಜ್ಯ ಸರಕಾರ 2ಎ ಗೆ ಸೇರಿಸುವುದು ಮತ್ತು ಲಿಂಗಾಯತ ಸಮಾಜಗಳನ್ನ ಕೇಂದ್ರ ಸರಕಾರ ಓಬಿಸಿಗೆ ಸೇರಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ ಆರಂಭಗೊಂಡಿದ್ದು, ಈ ಪಾದಯಾತ್ರೆಯಲ್ಲಿ ಭಾಗವಹಿಸಲು ಧಾರವಾಡದಿಂದಲೂ ಸಮಾಜದ ಮುಖಂಡರು ಹೊರಟಿದ್ದಾರೆ.
ಧಾರವಾಡ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಧಾರವಾಡದ ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮಾಜೀಯವರ ಅಭಿಮಾನಿ ಬಳಗದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಮಾಜದ ಮುಖಂಡ ಸಿದ್ದಣ್ಣ ಸಪ್ಪೂರಿ ಎಲ್ಲರನ್ನೂ ಆಹ್ವಾನದ ಮೇರೆಗೆ ಪ್ರಯಾಣ ಬೆಳೆಸಿದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಸಾವಿರಾರೂ ಜನರು ಭಾಗವಹಿಸುತ್ತಿದ್ದು, ಇಂದು ಕೂಡಲಸಂಗಮದಿಂದ ಹೊರಟು ಹುನಗುಂದ ಪಟ್ಟಣದಲ್ಲಿ ವಾಸ್ತವ್ಯ ನಡೆಯಲಿದೆ.
ಪಾದಯಾತ್ರೆಯು ಜನೇವರಿ 31ಕ್ಕೆ ಬೆಂಗಳೂರು ತಲುಪಲಿದ್ದು, ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲವೆಂದು ಮುಖಂಡರು ಹೇಳಿದ್ದಾರೆ. ಇಂದು ಧಾರವಾಡದಿಂದ ಸಿದ್ಧಣ್ಣ ಸಪ್ಪೂರಿ, ತಾಲೂಕು ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ, ಚಂದ್ರಗೌಡ ಖಾನಗೌಡ್ರ, ಪ್ರದೀಪ ಪಾಟೀಲ, ಅಜ್ಜಪ್ಪ ಗುಲಾಲದವರ, ಪ್ರಕಾಶ ಭಾವಿಕಟ್ಟಿ ಸೇರಿದಂತೆ ಹಲವರು ಕೂಡಲಸಂಗಮದತ್ತ ಪ್ರಯಾಣ ಬೆಳೆಸಿದರು.