ಧಾರವಾಡ ಶಿವಾಜಿ ಸರ್ಕಲ್ ನಲ್ಲಿ ಹೆಣ..!

ಧಾರವಾಡ: ನಗರದ ಪ್ರಮುಖ ಜನನಿಬೀಡ ಪ್ರದೇಶವಾದ ಶಿವಾಜಿ ಸರ್ಕಲ್ ಬಳಿಯೇ ಅಪರಿಚಿತ ವ್ಯಕ್ತಿಯೋರ್ವನ ಶವ ದೊರಕಿದ್ದು, ಯಾವ ಕಾರಣಕ್ಕೆ ಸಾವಿಗೀಡಾಗಿದ್ದಾನೆ ಎಂಬುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ.
ಯಾವುದೋ ವ್ಯಕ್ತಿ ಕುಡಿದು ಮತ್ತಿನಲ್ಲಿ ಮಲಗಿದ್ದಾನೆ ಎಂದುಕೊಂಡು ಜನರು ಬೆಳಿಗ್ಗೆಯಿಂದಲೇ ಅತ್ತಿಂದಿತ್ತ ಸಂಚಾರ ಮಾಡಿದ್ದಾರೆ. ಆದರೆ, ಕೆಲವು ಸಮಯದ ನಂತರ ವ್ಯಕ್ತಿ ಮಲಗಿಲ್ಲ, ತೀರಿಕೊಂಡಿದ್ದಾನೆಂದು ಗೊತ್ತಾಗಿದೆ.
ತಕ್ಷಣವೇ ಸ್ಥಳೀಯರು ವ್ಯಾಪಾರಿಗಳು ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಧಾರವಾಡ ಉಪನಗರ ಠಾಣೆಯ ಪೊಲೀಸರು ಶವವನ್ನ ಧಾರವಾಡದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶಿವಾಜಿ ಸರ್ಕಲ್ ಮೂಲಕ ಬೇರೆ ಗ್ರಾಮೀಣ ಪ್ರದೇಶಕ್ಕೆ ಹೋಗುವ ವ್ಯಕ್ತಿ ಇರಬಹುದೆಂದು ಶಂಕಿಸಲಾಗಿದ್ದು, ಶವವನ್ನ ಜಿಲ್ಲಾಸ್ಪತ್ರೆಯಲ್ಲಿಡಲಾಗಿದೆ. ಯಾವುದಾದರೂ ಮಾಹಿತಿ ಸಿಕ್ಕ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.