ಕರ್ತವ್ಯದ ಮೇಲಿದ್ದ ಎಎಸ್ಐ ಮೇಲೆ “ಆಟೋ”ಟೋಪ.. ಕೈಗೆ ಗಾಯ.. ಸಾರ್ವಜನಿಕರಿಂದ ಚಾಲಕನಿಗೆ ಶಾಸ್ತಿ..!

ಹುಬ್ಬಳ್ಳಿ: ನಗರದ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಕರ್ತವ್ಯದ ಮೇಲಿದ್ದ ಪೊಲೀಸ್ ಅಧಿಕಾರಿಯ ಮೇಲೆ ಆಟೋ ಚಾಲಕನೊಬ್ಬ ಆಟೋ ಬಡಿಸಿ ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರೆ ಆಟೋ ಸಮೇತ ಹಿಡಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಆಟೋ ಚಾಲಕ ಸಲ್ಮಾನ ಕೊಲ್ಲಾಪುರ ಎಂಬಾತ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು, ಆಗ ಹಿಡಿಯಲು ಹೋದಾಗ ಎಎಸ್ಐಗೂ ಆಟೋ ಬಡಿಸಿ ಗಾಯಗೊಳಿಸಿದ್ದಾನೆ.
ಇದರಿಂದ ಸಾರ್ವಜನಿಕರು ಆಟೋ ಚಾಲಕನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ASI ಭಜಂತ್ರಿ ಎಂಬುವರಿಗೆ ಗಾಯಗಳಾಗಿದ್ದು,ಚಿಕಿತ್ಸೆ ನೀಡಲಾಗುತ್ತಿದೆ. ಎಎಸ್ಐಯವರಿಗೆ ಆಟೋ ಬಡಿಸಿದ ಹಿನ್ನೆಲೆಯಲ್ಲಿ ಆಟೋವನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.