Karnataka Voice

Latest Kannada News

CPIಗಳಾದ ಚೆನ್ನಣ್ಣನವರ-ಕಪ್ಪತನವರ ಟೀಂ ವರ್ಕೌಟ್: ಬ್ಯಾಹಟ್ಟಿ, ಶಿವಳ್ಳಿಯಲ್ಲಿನ ಕಳ್ಳತನ ಆರೋಪಿ ಫಿಲ್ಮೀ ಸ್ಟೈಲ್‌ನಲ್ಲಿ ಅಂದರ್.‌‌..‌

Spread the love

ಧಾರವಾಡ ಜಿಲ್ಲೆಯಲ್ಲಿ ಅಂತರ್ ಜಿಲ್ಲಾ ಕಳ್ಳರ ಬಂಧನ: ಚಿನ್ನ-ಬೆಳ್ಳಿ ವಶ

​ಧಾರವಾಡ: ಹುಬ್ಬಳ್ಳಿ ಗ್ರಾಮೀಣ ಹಾಗೂ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳನ್ನು ಧಾರವಾಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಅಂತರ್ ಜಿಲ್ಲಾ ಕಳ್ಳನೊಬ್ಬನನ್ನು ಬಂಧಿಸಿ ಸುಮಾರು ₹4,80,000/- ಗೂ ಅಧಿಕ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಹಟ್ಟಿ ಗ್ರಾಮ ಹಾಗೂ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದಲ್ಲಿ ಮನೆ ಕಳ್ಳತನಗಳು ಜರುಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ಕೈಗೊಂಡು, ಗದಗ ಜಿಲ್ಲೆಯ ಶಿರಹಟ್ಟಿಯ ಮಂಜುನಾಥ ಹನುಮಂತಪ್ಪ ಮೋಡಿಕೇರ ಎಂಬಾತನನ್ನು ಬಂಧಿಸಿದ್ದಾರೆ.

​ ವಶಪಡಿಸಿಕೊಳ್ಳಲಾದ ವಸ್ತುಗಳು

  • ​ಚಿನ್ನಾಭರಣ: ಸುಮಾರು 50 ಗ್ರಾಂ ಬಂಗಾರದ ಆಭರಣಗಳು
  • ​ಬೆಳ್ಳಿಯ ಆಭರಣಗಳು: 80 ಗ್ರಾಂ ಬೆಳ್ಳಿ
  • ​ನಗದು: ₹40,000/- ರೋಖ ಹಣ
  • ​ಇTರS ವಸ್ತುಗಳು: ಒಂದು ಮೋಟಾರ್ ಸೈಕಲ್ ಮತ್ತು ಒಂದು ಮೊಬೈಲ್
  • ​ಒಟ್ಟು ಮೌಲ್ಯ: ಅಂದಾಜು ₹4,80,000/- ಕ್ಕಿಂತ ಅಧಿಕ

​ಈ ಕುರಿತು ಮಾತನಾಡಿದ ಪೊಲೀಸರು, ಒಟ್ಟು ಇಬ್ಬರು ಆರೋಪಿಗಳಿದ್ದು, ಇನ್ನೊಬ್ಬ ಆರೋಪಿಯು ಪರಾರಿಯಾಗಿದ್ದಾನೆ. ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಹುಬ್ಬಳ್ಳಿ ಗ್ರಾಮೀಣ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಕಟಗಿ ಅವರ ಮುಂದಾಳತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಮುರುಗೇಶ ಚನ್ನಣ್ಣವರ, ನವಲಗುಂದ ವೃತ್ತದ ಸಿಪಿಐ ರವಿ ಕಪ್ಪತ್ತಣವರ, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪಿಎಸ್‌ಐ ಇಮ್ರಾನ ಹಾಗೂ ಎಎಸ್‌ಐ ಎನ್. ಎಮ್. ಹೊನ್ನಪ್ಪನವರ, ಎಚ್. ಬಿ. ಐಹೋಳೆ, ಸಿ. ಬಿ. ಜನಗಣ್ಣವರ, ಚನ್ನಪ್ಪ ಬಳ್ಕೊಳ್ಳಿ, ಮಾಂತೇಶ ಮದ್ದೀನ ಹಾಗೂ ಮಹಾಂತೇಶ ನೆಟಗಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ​ಅಣ್ಣಿಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ: ಎಎಸ್‌ಐ ಎಸ್. ಎಮ್. ಮಲ್ಲನಗೌಡರ ಹಾಗೂ ಚನ್ನಮಲ್ಲಯ್ಯ ಮಠಪತಿ ಅವರು ಸಾಥ್ ನೀಡಿದ್ದರು. ತಾಂತ್ರಿಕ ವಿಭಾಗದಿಂದ ರವಿಕುಮಾರ ಮತ್ತುವಿಠಲ ಡಂಗನವರ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಪ್ರಕರಣವನ್ನು ಭೇದಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಮಂಜೂರು ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *

You may have missed