ಹುಬ್ಬಳ್ಳಿ: ತ್ರಿಮೂರ್ತಿಗಳು “ಅಪಾರ್ಟ್‌ಮೆಂಟ್”ನಲ್ಲಿ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾರಂತೆ… ಇವರ ಬಗ್ಗೆ ‘KV’ಗೆ ಬರುತ್ತಿರುವ ಕಾಲ್‌ಗಳು ಏನಂತವೇ ಗೊತ್ತಾ…!?
ಹುಬ್ಬಳ್ಳಿ: ಮೂವರು ವಂಚಕರು ಕೂಡಿಕೊಂಡು ಹಲವರಿಗೆ ಟೊಪ್ಪಿಗೆ ತೊಡಿಸಿರುವ ಆರೋಪದ ಕುರಿತು ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹೊರ ಹಾಕಿದ ನಂತರ ಮತ್ತಷ್ಟು ರಹಸ್ಯಗಳು ಹೊರಬರತೊಡಗಿವೆ.
ಹೌದು… ಈ ಮೂವರ ಪೈಕಿ ಓರ್ವ ಮನೆಯಲ್ಲಿಯೇ ಕೆಸೀನೋ ಮಾದರಿ ದಂಧೆಯನ್ನ ಶುರುವಿಟ್ಟುಕೊಂಡು ಪೊಲೀಸರ ಬಲೆಗೆ ಬಿದ್ದು ಹೊರಳಾಡಿದ್ದಾನಂತೆ. ಅಷ್ಟೇ ಅಲ್ಲ, ಕೆಲವು ಪೊಲೀಸರನ್ನ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿಸಿ ಮೋಜು ಮಾಡಿದ್ದಾರಂತೆ.

ಕಳೆದ ಎರಡು ದಿನದಿಂದ ತ್ರಿಮೂರ್ತಿಗಳ ಪರಿಚಯದವರು ಎಂದು ಹೇಳಿಕೊಂಡು ಹಲವರು ಕರ್ನಾಟಕವಾಯ್ಸ್.ಕಾಂಗೆ ಮಾತನಾಡಿದ್ದಾರೆ. ಅದರಲ್ಲಿನ ಬಹುತೇಕರು, ಹೌದು ಸರ್ ನೀವು ಬರೆದದ್ದು ಸತ್ಯ ಎಂದು ಹೇಳಿದ್ದನ್ನೂ ಕೂಡಾ ನಾವುಗಳು ರೆಕಾರ್ಡ್ ಮಾಡಿಕೊಂಡಿದ್ದೇವೆ.
ಅರುಣ ಕಠಾರೆ, ಕಿರಣ ದಲಭಂಜನ, ಪವನ ಹಬೀಬ ಈ ಮೂವರ ಕುರಿತು ಬಂದಿರುವ ಆರೋಪದ ಬಗ್ಗೆ ಅವರೇನಾದರೂ ಹೇಳಿಕೆ ನೀಡಿದರೇ, ಕೆವಿ ಅದನ್ನೂ ಕೂಡಾ ಹಂಚಿಕೊಳ್ಳುತ್ತದೆ.
ಫ್ರೀ ಏರ್ ಟಿಕೆಟ್, ಹೊಟೇಲ್, ಪಾರ್ಟಿ ಫ್ರೀ ಹೆಸರೇಳಿ ನಡೆಯುತ್ತಿರುವ ಈ ವಂಚನೆಯ ಪ್ರತಿಯೊಂದನ್ನೂ ಹೊರಗೆ ಹಾಕಲು ಕೆವಿ ಹಿಂದೆ ಸರಿಯುವುದಿಲ್ಲ. ಏಕೆಂದರೆ, ಮೋಸದ ಮೂಲಕ ಮನೆಗಳನ್ನ ಹಾಳು ಮಾಡಲಾಗುತ್ತಿದೆ. ಪೊಲೀಸರು ಕೂಡಾ ಎಚ್ಚೆತ್ತುಕೊಳ್ಳಬೇಕಿದೆ.
